
ಬೆಂಗಳೂರು: ಸೋಂಕಿನ ಸುನಾಮಿಯ ಆಟಕ್ಕೆ ಬೆಂಗಳೂರು ಪತರ್‌ಗುಟ್ಟಿದೆ. ನಿನ್ನೆ ಕೂಡಾ ಡೆಡ್ಲಿ ಆಟವನ್ನೇ ಆಡಿರೋ ಕೊರೊನಾ, ಏಳುನೂರರ ಗಡಿ ದಾಟಿ ಇಬ್ಬರ ಉಸಿರು ನಿಲ್ಲಿಸಿದೆ. ಅದರಲ್ಲೂ ಶಾಕಿಂಗ್ ನ್ಯೂಸ್ ಅಂದ್ರೆ ಸಿಟಿಯಲ್ಲಿ ಸೋಂಕಿತರು ಗುಣಮುರಾಗಿ ಡಿಸ್ಚಾರ್ಜ್ ಆಗುತ್ತಲೇ ಇಲ್ಲ.
ಸ್ಫೋಟ.. ಕೊರೊನಾ ಸ್ಫೋಟ.. ಬೆಂಗಳೂರಿನಲ್ಲೇ ನಿತ್ಯ ಆಗ್ತಿರೋದು ಕೊರೊನಾ ಸ್ಫೋಟ. ತನ್ನೆಲ್ಲಾ ದಂಡು ಕಟ್ಟಿಕೊಂಡು ಬಂದು ಸಿಲಿಕಾನ್ ಸಿಟಿ ಮೇಲೆ ದಾಳಿ ಮಾಡ್ತಿದೆ . ನೋಡ ನೋಡ್ತಿದ್ದಂತೆ ನಗರದಲ್ಲೇ ಸೋಂಕಿತರ ಸಂಖ್ಯೆ ಐದು ಸಾವಿರದ ಗಡಿ ದಾಟಿದೆ. ಇಲ್ಲಿ ಸೋಂಕಿನಿಂದ ಸತ್ತವರ ಸಂಖ್ಯೆ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಅದ್ರಲ್ಲೂ ಕಳೆದ ಐದು ದಿನದಲ್ಲಿನ ಕೊರೊನಾ ಜರ್ನಿಯೇ ಭಯಾನಕವಾಗಿದೆ.
ರಾಜಧಾನಿಯಲ್ಲಿ ಕ್ರೂರಿ ಕೊರೊನಾದ ಡೆಡ್ಲಿ ದಾಳಿ!
ರಾಜ್ಯದಲ್ಲಿ ಕಳೆದ ಐದು ದಿನದಿಂದ ನಿತ್ಯ ದೊಡ್ಡ ದಾಳಿ ಮಾಡ್ತಿರೋ ಕೊರೊನಾ ನಿನ್ನೆ ಕೂಡಾ ಕರ್ನಾಟಕವೇ ನಡುವಂತೆ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 1,272 ಜನರ ಮೇಲೆ ಸವಾರಿ ಮಾಡಿದೆ. ಅದ್ರಲ್ಲೂ ಬೆಂಗಳೂರಿನಲ್ಲೇ ನಿನ್ನೆ ಒಂದೇ ದಿನ ಬರೋಬ್ಬರಿ 735 ಜನ ಸೋಂಕಿತರಾಗಿದ್ದಾರೆ.
ಆ ಮೂಲಕ ಸಿಲಿಕಾನ್ ಸಿಟಿಯಲ್ಲೇ ಸೋಂಕಿತರ ಸಂಖ್ಯೆ ಐದು ಸಾವಿರದ ಗಡಿ ದಾಟಿದೆ. ಅಂದ್ರೆ ಇಲ್ಲೇ 5,290 ಸೋಂಕಿತರಿದ್ದಾರೆ. ಇದಕ್ಕಿಂತಲೂ ಭಯಾನಕ ವಿಷ್ಯ ಅಂದ್ರೆ ಇಲ್ಲಿ ಗುಣಮುಖರಾಗುವವರ ಸಂಖ್ಯೆ ಕೂಡಾ ಕಡಿಮೆಯಾಗ್ತಿದೆ. ಇದುವರೆಗೆ ಕೇವಲ 543 ಜನ ಮಾತ್ರ ಗುಣಮುಖರಾಗಿ ಮನೆ ಸೇರಿದ್ದು, ಇನ್ನೂ 4,649 ಜನ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ. ಇನ್ನು ನಿನ್ನೆ ಐವತ್ತು ವರ್ಷದ ಒಬ್ಬ ಪುರುಷ, ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಉಸಿರು ನಿಲ್ಲಿಸಿದ್ದಾರೆ. ಆ ಮೂಲಕ ನಗರದಲ್ಲೇ ಕೊರೊನಾದಿಂದ ಸತ್ತವರ ಸಂಖ್ಯೆ 97 ಕ್ಕೆ ಏರಿಕೆಯಾಗಿದೆ.
ಐದು ದಿನ..‘ಸ್ಫೋಟ’ದ ಆಟ!
ಜೂನ್ 27 ರಿಂದ ಬೆಂಗಳೂರಿನ ಮೇಲೆ ಮಹಾ ದಾಳಿ ಆರಂಭಿಸಿರೋ ಕೊರೊನಾ ಆವತ್ತು 596 ಜನರ ಮೇಲೆ ಅಟ್ಯಾಕ್ ಮಾಡಿತ್ತು. ಆದ್ರೆ ಅವತ್ತು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕೇವಲ ಏಳು ಮಾತ್ರ ಇತ್ತು. ಇನ್ನು ಜೂನ್ 28 ರಂದು ಬರೋಬ್ಬರಿ 783 ಮಂದಿಯ ಮೇಲೆ ಕೊರೊನಾ ಸವಾರಿ ಮಾಡಿತ್ತು. ಆದ್ರೆ ಅವತ್ತು ಒಬ್ಬೇ ಒಬ್ರು ಆಸ್ಪತ್ರೆಯಿಂದ ಬಿಡುಗಡೆಯಾಗಿರಲಿಲ್ಲ. ಜೂನ್ 29 ರಂದು 738 ಜನರಿಗೆ ವೈರಸ್ ವಕ್ಕರಿಸಿತ್ತು. ಆದ್ರೆ ಅವತ್ತು ಕೂಡ ಒಬ್ಬೇ ಒಬ್ಬ ಸೋಂಕಿತ ಕೂಡಾ ಡಿಸ್ಚಾರ್ಜ್ ಆಗಿರಲಿಲ್ಲ.
ಇನ್ನು ಜೂನ್ 30 ರಂದು ಸ್ವಲ್ಪ ಅಬ್ಬರ ಕಡಿಮೆ ಮಾಡಿದ ಸೋಂಕು 503 ಜನರನ್ನ ತನ್ನ ಖಾತೆಗೆ ಹಾಕಿಕೊಂಡಿತ್ತು. ಜತೆಗೆ 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ರಿಲೀಸ್ ಆಗಿದ್ರು. ಆದ್ರೆ ಮತ್ತೆ ತನ್ನ ಆಟ ಶುರು ಮಾಡಿದ ಕ್ರೂರಿ ನಿನ್ನೆ 735 ಜನರನ್ನ ತನ್ನ ಲೀಸ್ಟ್‌ಗೆ ಸೇರಿಸಿಕೊಂಡಿದೆ . ನಿನ್ನೆ ಕೂಡಾ ಒಬ್ಬೇ ಒಬ್ರು ಆಸ್ಪತ್ರೆಯಿಂದ ಹೊರಬಂದಿಲ್ಲ. ಕಳೆದ ಐದು ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 3,355 ಜನ ಸೋಂಕಿತರಾಗಿದ್ದಾರೆ. ಆದ್ರೆ ಐದು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಕೇವಲ 17 ಜನ ಮಾತ್ರ.
ಒಟ್ನಲ್ಲಿ ಕಳೆದ ಐದು ದಿನದಿಂದ ನಿತ್ಯ ದೊಡ್ಡ ಪ್ರಮಾಣದಲ್ಲೇ ದಾಳಿ ಮಾಡ್ತಿರೋ ಸೋಂಕು, ರಾಜಧಾನಿಯಲ್ಲೇ ಐದು ಸಾವಿರದ ಗಡಿ ದಾಟಿದೆ. ಇದೇ ವೇಗದಲ್ಲೇ ಕೊರೊನಾ ಓಟ ಮುಂದುವರಿದ್ರೆ ಬೆಂಗಳೂರನ್ನ ಆ ದೇವರೇ ಕಾಪಾಡಬೇಕು.
Published On - 7:10 am, Thu, 2 July 20