ಕೊರೊನಾ ಕಸದ ರಾಶಿ: ಇದೇನು ಆಸ್ಪತ್ರೆಯೋ, ತಿಪ್ಪೆ ಗುಂಡಿಯೋ?

ಆನೇಕಲ್: ಬೆಂಗಳೂರಿನ ಹೊರವಲಯದಲ್ಲಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಕ್ಸ್‌ಫರ್ಡ್ ಆಸ್ಪತ್ರೆ ನೋಡಿದಾಗ ಅದೇನು ಆಸ್ಪತ್ರೆಯೋ, ಕಸದ ಖಾನೆಯೋ? ಎನ್ನುವಂತಿದೆ ಎಂದು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪೇಶೆಂಟ್‌ಗಳು ಅಳಲು ತೋಡಿಕೊಂಡಿದ್ದಾರೆ. ಹೌದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ಆಸ್ಪತ್ರೆ ಕೋವಿಡ್ ಪೇಶೆಂಟ್ಸ್‌ಗೆ ಚಿಕಿತ್ಸೆ ನೀಡುತ್ತಿದೆ. ಆದ್ರೆ ಆಸ್ಪತ್ರೆಯಲ್ಲಿ ಇರಬೇಕಾದ ಸ್ವಚ್ಛತೆ ಇಲ್ಲಿ ಇಲ್ಲವೇ ಇಲ್ಲ. ಕಸದ ರಾಶಿ ಮತ್ತು ಉಪಹಾರ ಹಾಗೂ ಊಟ ಮಾಡಿದ ತಿಂಡಿ ಪ್ಲೇಟ್‌ಗಳನ್ನು ಎಲ್ಲೆಂದೆರಲ್ಲಿ ಹಾಗೇಯೇ ಬಿಸಾಡಿದ್ದಾರೆ ಎಂದು ಅಲ್ಲಿನ […]

ಕೊರೊನಾ ಕಸದ ರಾಶಿ: ಇದೇನು ಆಸ್ಪತ್ರೆಯೋ, ತಿಪ್ಪೆ ಗುಂಡಿಯೋ?

Updated on: Jul 17, 2020 | 3:12 PM

ಆನೇಕಲ್: ಬೆಂಗಳೂರಿನ ಹೊರವಲಯದಲ್ಲಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಕ್ಸ್‌ಫರ್ಡ್ ಆಸ್ಪತ್ರೆ ನೋಡಿದಾಗ ಅದೇನು ಆಸ್ಪತ್ರೆಯೋ, ಕಸದ ಖಾನೆಯೋ? ಎನ್ನುವಂತಿದೆ ಎಂದು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪೇಶೆಂಟ್‌ಗಳು ಅಳಲು ತೋಡಿಕೊಂಡಿದ್ದಾರೆ.

ಹೌದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ಆಸ್ಪತ್ರೆ ಕೋವಿಡ್ ಪೇಶೆಂಟ್ಸ್‌ಗೆ ಚಿಕಿತ್ಸೆ ನೀಡುತ್ತಿದೆ. ಆದ್ರೆ ಆಸ್ಪತ್ರೆಯಲ್ಲಿ ಇರಬೇಕಾದ ಸ್ವಚ್ಛತೆ ಇಲ್ಲಿ ಇಲ್ಲವೇ ಇಲ್ಲ. ಕಸದ ರಾಶಿ ಮತ್ತು ಉಪಹಾರ ಹಾಗೂ ಊಟ ಮಾಡಿದ ತಿಂಡಿ ಪ್ಲೇಟ್‌ಗಳನ್ನು ಎಲ್ಲೆಂದೆರಲ್ಲಿ ಹಾಗೇಯೇ ಬಿಸಾಡಿದ್ದಾರೆ ಎಂದು ಅಲ್ಲಿನ ಕೋವಿಡ್ ಸೋಂಕಿತರು ಅವಲತ್ತುಕೊಂಡಿದ್ದಾರೆ.

ಪೇಶೆಂಟ್ಸ್ ಇರುವ ಕೊಠಡಿಯ ಪಕ್ಕ ಇಂಥ ಕಸ ರಾಶಿ ರಾಶಿಯಾಗಿದೆ. ಆದ್ರೆ ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಆರೋಪಿಸಿದ್ದಾರೆ.

Published On - 3:06 pm, Fri, 17 July 20