ಹುಬ್ಬಳ್ಳಿ: ಕೊರೊನಾ ನಮಗೆ ಅರಿವೇ ಇಲ್ಲದೆ ನಮ್ಮ ಒಳಗೆ ಸೇರಿಕೊಂಡಿರುತ್ತೆ. ಸುಳಿವೂ ಕೊಡದೆ ನಮ್ಮ ಉಸಿರು ನಿಲ್ಲಿಸುತ್ತೆ. ಮಹಾಮಾರಿ ಕೊರೊನಾ ಜನರನ್ನು ಕಪಿಮುಷ್ಠಿಯಲ್ಲಿ ಬಂಧಿಸಿದೆ. ಹೀಗಾಗಿ ಜನ ತುಂಬ ಮುನ್ನೆಚ್ಚರಿಕೆಯಿಂದಿರಬೇಕು. ಆದರೆ ಇಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸದೆ 15ದಿನಗಳ ಕಾಲ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಎಡವಟ್ಟಿನಿಂದ ದೊಡ್ಡ ಸಂಕಷ್ಟವೊಂದು ಎದುರಾಗಿದೆ.
ಕಳ್ಳತನ ಕೇಸ್ನಲ್ಲಿ ಬಂಧಿಸಿದ್ದ ಗದಗ ಮೂಲದ ವ್ಯಕ್ತಿಯನ್ನು ಹುಬ್ಬಳ್ಳಿಯ ಉಪನಗರ ಇನ್ಸ್ಪೆಕ್ಟರ್ ಎಸ್.ಕೆ ಹೊಳೆಣ್ಣವರ್ ಟೆಸ್ಟ್ಗೆ ಒಳಪಡಿಸದೇ ಕಳೆದ 15 ದಿನದಿಂದ ಠಾಣೆ ಪಕ್ಕದ ಲಾಡ್ಜ್ನಲ್ಲಿ ಇರಿಸಿದ್ದರು. 15 ದಿನಗಳ ಬಳಿಕ ಕೊವಿಡ್ ಟೆಸ್ಟ್ ಮಾಡಿದಾಗ ಆತನಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಈಗ ಸುಮಾರು 24ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೊನಾ ಆತಂಕ ಉಂಟಾಗಿದೆ. ಇಷ್ಟಾದ್ರು ಪೊಲೀಸರನ್ನ ಕೊವಿಡ್ ಟೆಸ್ಟ್ ಮಾಡಲು ಹಿಂದೇಟು ಹಾಕಲಾಗಿದೆ. ಕೊರೊನಾ ಗುಣ ಲಕ್ಷಣ ಕಂಡ್ರೆ ಮಾತ್ರ ಟೆಸ್ಟ್ ಮಾಡೋದಾಗಿ ಹೇಳಿದ್ದಾರಂತೆ. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಆತಂಕ ಶುರುವಾಗಿದೆ.
ಸೋಂಕಿತ ಕಳ್ಳನ ಜೊತೆ 24 ಸಿಬ್ಬಂದಿ ಸಂಪರ್ಕದಲ್ಲಿದ್ದರು. ಜೊತೆಗೆ ಇನ್ಸ್ಪೆಕ್ಟರ್ ಕೂಡಾ ಕಳ್ಳನನ್ನ ವಿಚಾರಣೆ ಮಾಡಿದ್ದರು. ಅಲ್ಲದೆ ಪೊಲೀಸ್ ಕಮೀಷನರ್ ಕಚೇರಿಗೂ ಭೇಟಿ ನೀಡಿದ್ದರು. ಇಷ್ಟೆಲ್ಲಾ ಆದ್ರು ಪೊಲೀಸರ ಕೊವಿಡ್ ಟೆಸ್ಟ್ ಮಾಡದೇ ಇರೋದೆ ಆತಂಕ ಸೃಷ್ಟಿಸಿದೆ. ಇನ್ಸ್ಪೆಕ್ಟರ್ ಮಾಡಿದ ಏಡವಟ್ಟಿಗೆ ಇಡೀ ಠಾಣೆಯೇ ಸಿಬ್ಬಂದಿಗೆ ಆತಂಕದಲ್ಲಿದ್ದಾರೆ. ಅಲ್ಲದೆ ಆತ ಕದ್ದ ವಸ್ತುಗಳನ್ನ ರಿಕವರಿ ಮಾಡಲು ಕೊರೊನಾ ರೋಗಿಯನ್ನ ಕರೆದುಕೊಂಡು ಬೇರೆ ಬೇರೆ ಊರಿಗೆ ಪೊಲೀಸರು ಹೊಗಿದ್ದರು.