ಚಳಿಗಾಲದಲ್ಲಿ ವೈರಸ್ ವಿಸ್ಫೋಟದ ಆತಂಕ, ತಜ್ಞರಿಂದ ಹೊರ ಬಿತ್ತು ಆಘಾತಕಾರಿ ಮಾಹಿತಿ

|

Updated on: Jul 01, 2020 | 6:51 AM

ಬೆಂಗಳೂರು: ಡೇಂಜರ್.. ಡೇಂಜರ್.. ಡೇಂಜರ್.. ಹೆಮ್ಮಾರಿ ಕೊರೊನಾ ವೈರಸ್ ದಶದಿಕ್ಕುಗಳಲ್ಲೂ ದಿಗ್ಬಂಧನ ವಿಧಿಸಿ ಸಿಕ್ಕಸಿಕ್ಕವ್ರ ದೇಹ ಹೊಕ್ಕು ಜೀವ ಹಿಂಡುತ್ತಿದೆ. ಎಲ್ಲೋ ದೂರದ ಊರಲ್ಲಿ ನಂಜಿನ ಅಟ್ಟಹಾಸದ ಸುದ್ದಿ ಕೇಳಿ ಮನೆಯಲ್ಲೇ ಕೂತು ಬೆವರುತ್ತಿದ್ದ ಜನರ ಕಾಲ ಬುಡಕ್ಕೇ ಬಂದು ವಕ್ಕರಿಸಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಹೆಮ್ಮಾರಿ ವೈರಸ್​ನದ್ದೇ ರಾಜ್ಯಭಾರ. ಬೆಂಗಳೂರಿನಲ್ಲಿ ಕೊರೊನಾ ಜೊತೆಗೆ ಇತರೆ ಕಾಯಿಲೆಗಳು ಹಾಗೂ ವಾತಾವರಣ ಬದಲಾವಣೆ ಜನರ ಬದುಕನ್ನೇ ಹಿಂಡಿಹಿಪ್ಪೆ ಮಾಡಿದೆ. ಬೆಂಗಳೂರಿನಲ್ಲಿ ಕಡಿಮೆಯಾಗ್ತಿದೆ ರಿಕವರಿ ರೇಟ್! ದೇಶದ ಇತರ […]

ಚಳಿಗಾಲದಲ್ಲಿ ವೈರಸ್ ವಿಸ್ಫೋಟದ ಆತಂಕ, ತಜ್ಞರಿಂದ ಹೊರ ಬಿತ್ತು ಆಘಾತಕಾರಿ ಮಾಹಿತಿ
Follow us on

ಬೆಂಗಳೂರು: ಡೇಂಜರ್.. ಡೇಂಜರ್.. ಡೇಂಜರ್.. ಹೆಮ್ಮಾರಿ ಕೊರೊನಾ ವೈರಸ್ ದಶದಿಕ್ಕುಗಳಲ್ಲೂ ದಿಗ್ಬಂಧನ ವಿಧಿಸಿ ಸಿಕ್ಕಸಿಕ್ಕವ್ರ ದೇಹ ಹೊಕ್ಕು ಜೀವ ಹಿಂಡುತ್ತಿದೆ. ಎಲ್ಲೋ ದೂರದ ಊರಲ್ಲಿ ನಂಜಿನ ಅಟ್ಟಹಾಸದ ಸುದ್ದಿ ಕೇಳಿ ಮನೆಯಲ್ಲೇ ಕೂತು ಬೆವರುತ್ತಿದ್ದ ಜನರ ಕಾಲ ಬುಡಕ್ಕೇ ಬಂದು ವಕ್ಕರಿಸಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಹೆಮ್ಮಾರಿ ವೈರಸ್​ನದ್ದೇ ರಾಜ್ಯಭಾರ. ಬೆಂಗಳೂರಿನಲ್ಲಿ ಕೊರೊನಾ ಜೊತೆಗೆ ಇತರೆ ಕಾಯಿಲೆಗಳು ಹಾಗೂ ವಾತಾವರಣ ಬದಲಾವಣೆ ಜನರ ಬದುಕನ್ನೇ ಹಿಂಡಿಹಿಪ್ಪೆ ಮಾಡಿದೆ.

ಬೆಂಗಳೂರಿನಲ್ಲಿ ಕಡಿಮೆಯಾಗ್ತಿದೆ ರಿಕವರಿ ರೇಟ್!
ದೇಶದ ಇತರ ಮೆಟ್ರೋ ಸಿಟಿಗಳಿಗೆ ಹೋಲಿಕೆ ಮಾಡಿದ್ರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಡಿಸ್ಚಾರ್ಜ್ ಆಗೋ ಸಂಖ್ಯೆ ಕಡಿಮೆ ಇದೆ. ಅದ್ರಲ್ಲೂ ಬೇರೆ ಬೇರೆ ಕಾಯಿಲೆಗಳಿಂದ ಬಳಲ್ತಿರೋ ವೃದ್ಧರಿಗೆ ಏನಾದ್ರೂ ಕೊರೊನಾ ಅಟಕಾಯಿಸಿಕೊಂಡು ಬಿಟ್ರೆ ಕಥೆ ಮುಗೀತು ಅಂತಾನೇ ಅರ್ಥ. ನಗರದಲ್ಲಿ ಡಯಾಬಿಟೀಸ್ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂಥವ್ರಿಗೆ ಕೊರೊನಾ ಅಟ್ಯಾಕ್ ಮಾಡೋ ಮೂಲಕ ನಿಯಂತ್ರಣ ತಪ್ಪಿ ಹೋಗುತ್ತಿದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಮೊದಲ ತಿಂಗಳ ಮಳೆಯೇ ಕೊರೊನಾ ಹರಡೋ ವೇಗವನ್ನು ಹೆಚ್ಚಿಸಿದೆ. ಇದ್ರ ಬೆನ್ನಲ್ಲೇ ಚಳಿಗಾಲ ಆರಂಭವಾಗಲಿದ್ದು, ವೈರಸ್ ವಿಸ್ಫೋಟವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ.

ಇನ್ನು ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗ್ತಿರೋದು ಹೇಗೆ ಅನ್ನೋ ಬಗ್ಗೆ ತಜ್ಞರು ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
‘ಆಷಾಢ’ದ ಆಪತ್ತು!
ವಾತಾವರಣ ಬದಲಾಗ್ತಿರೋದು ಬೆಂಗಳೂರಿಗೆ ಗಂಡಾಂತರ ತಂದೊಡ್ಡಲಿದೆ ಅಂತಾ ಶ್ವಾಸಕೋಶ ತಜ್ಞ ಡಾ. ಪವನ್ ಹೇಳಿದ್ದಾರೆ. ಅದ್ರಲ್ಲೂ ಆಷಾಢದಲ್ಲಿ ನಗರದ ಮೂಲೆ ಮೂಲೆಯಲ್ಲೂ ವೈರಸ್ ವಿಸ್ಫೋಟವಾಗಲಿದ್ಯಂತೆ. ಅದ್ರ ಬೆನ್ನಲ್ಲೇ ಚಳಿಗಾಲ ಆರಂಭವಾಗ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದೆ ಅಂತಾರೆ ತಜ್ಞರು.

ಇನ್ನು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೇ ಪ್ರಮುಖವಾಗಿ ವೈರಸ್ ಅಟ್ಯಾಕ್ ಮಾಡುತ್ತೆ ಅಂತಾ ಶ್ವಾಸಕೋಶ ತಜ್ಞ ಡಾ. ಪವನ್ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಸ್ತಮಾ, ಟಿಬಿ ಇರುವವರಿಗೆ ಕೊರೊನಾ ಪಾಸಿಟಿವ್ ಬರೋ ಸಾಧ್ಯತೆ ಇದೆ. ಇಂಥಾ ಆರೋಗ್ಯ ಸಮಸ್ಯೆ ಇರುವವರಿಗೆ ಸದ್ಯ ವಾತಾವರಣವೇ ಮಾರಕವಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯ. ಮತ್ತೊಂದು ಶಾಕಿಂಗ್ ವಿಚಾರ ಅಂದ್ರೆ ಬೆಂಗಳೂರಿನಲ್ಲಿ ಕೊರೊನಾ ಹರಡುವಿಕೆ ಸ್ಟೇಜ್ 2 ನಿಂದ ಸ್ಟೇಜ್ 3 ಕಡೆಗೆ ಹೋಗ್ತಿದೆ. ಕೆಲ ವಲಯಗಳಲ್ಲಿ ಸಮುದಾಯ ಹರಡುವಿಕೆ ಶುರುವಾಗಿದೆಯಂತೆ.

ಮಹಾಮಾರಿ ಜೊತೆಗೆ ’ILI’, ‘SARI’ ಸವಾರಿ!
ಇನ್ನು ಬೆಂಗಳೂರಿಗರನ್ನು ಕಾಡ್ತಿರೋ ಎರಡು ಕಂಟಕಗಳಂದ್ರೆ ILI ಹಾಗೂ SARI ಪ್ರಕರಣಗಳು. ಈ ಎರಡು ಸಮಸ್ಯೆಗಳಿಂದ ಬಳಲ್ತಿರೋವ್ರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಐಎಲ್​ಐ ಹಾಗೂ ಸಾರಿ ಪ್ರಕರಣಗಳಿಗೆ ಕನಿಷ್ಠ ಅಂದ್ರೂ 10ರಿಂದ 14 ದಿನಗಳ ಚಿಕಿತ್ಸೆ ಕೊಡಬೇಕಾಗುತ್ತೆ. ಹೀಗಾಗಿ ಈ ಸಮಸ್ಯೆ ಇರೋ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋದು ವಿಳಬವಾಗ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್​ಗಳೂ ಬೇಗ ಖಾಲಿಯಾಗ್ತಿಲ್ಲ.

ಒಟ್ನಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ಬಳಲ್ತಿರೋ ರಾಜಧಾನಿ ಜನರ ಗಾಯದ ಮೇಲೆ ಕೊರೊನಾ ಬರೆ ಎಳೆದಿದೆ. ಒಂದೆಡೆ ವಾತಾವರಣ ಬದಲಾವಣೆ ಹೊಡೆತವಾದ್ರೆ ಮತ್ತೊಂದೆಡೆ ಕಾಯಿಲೆಗಳ ಸರಮಾಲೆ ಬೆಂಗಳೂರಿಗರ ನಿದ್ದೆಯನ್ನೇ ಕಸಿದಿದೆ. ಅದ್ರಲ್ಲೂ ತಜ್ಞರ ವಾರ್ನಿಂಗ್ ಕೇಳಿ ನಿಂತ ನೆಲವೇ ಕುಸಿದಂತಾಗಿದೆ.