ಒಂದೇ ಗುಂಡಿಗೆ ಸೋಂಕಿತರ ಶವ, ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ ಜಿಲ್ಲಾಡಳಿತ
ಬಳ್ಳಾರಿ: ಒಂದೇ ಗುಂಡಿಯಲ್ಲಿ ಕೊರೊನಾ ಸೋಂಕಿತರ ಅಮಾನವೀಯ ಶವಸಂಸ್ಕಾರ ಹಿನ್ನೆಲೆಯಲ್ಲಿ ಕೊನೆಗೂ ತಪ್ಪೊಪ್ಪಿಕೊಂಡ ಜಿಲ್ಲಾಡಳಿತ ಜಿಲ್ಲೆಯ ಜನರಲ್ಲಿ ಕ್ಷಮೆ ಕೋರಿದೆ. ಅಲ್ಲದೆ, ಶವಸಂಸ್ಕಾರದ ಸಿಬ್ಬಂದಿಯನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಅಮಾನವೀಯ ಘಟನೆಗೆ ಜಿಲ್ಲಾಡಳಿತ ಕ್ಷಮೆ ಕೇಳಿದೆ. ಜಿಲ್ಲೆಯಲ್ಲಿ ಇನ್ನು ಮುಂದೆ ಶವಗಳ ನಿರ್ವಹಣೆಗೆ ವಿಧಿವಿಜ್ಞಾನ ಮತ್ತು ವಿಮ್ಸ್ನ ನುರಿತ ತಂಡವನ್ನು ನೇಮಕ ಮಾಡಿದೆ. ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಒಂದೇ ಗುಂಡಿಯಲ್ಲಿ ಎರಡು ಸೋಂಕಿತರ ಶವ, ತನಿಖೆಗೆ ಡಿಸಿ ಆದೇಶ ಬಳ್ಳಾರಿ […]
ಬಳ್ಳಾರಿ: ಒಂದೇ ಗುಂಡಿಯಲ್ಲಿ ಕೊರೊನಾ ಸೋಂಕಿತರ ಅಮಾನವೀಯ ಶವಸಂಸ್ಕಾರ ಹಿನ್ನೆಲೆಯಲ್ಲಿ ಕೊನೆಗೂ ತಪ್ಪೊಪ್ಪಿಕೊಂಡ ಜಿಲ್ಲಾಡಳಿತ ಜಿಲ್ಲೆಯ ಜನರಲ್ಲಿ ಕ್ಷಮೆ ಕೋರಿದೆ. ಅಲ್ಲದೆ, ಶವಸಂಸ್ಕಾರದ ಸಿಬ್ಬಂದಿಯನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದಾರೆ.
ಅಂತ್ಯಕ್ರಿಯೆ ವೇಳೆ ಅಮಾನವೀಯ ಘಟನೆಗೆ ಜಿಲ್ಲಾಡಳಿತ ಕ್ಷಮೆ ಕೇಳಿದೆ. ಜಿಲ್ಲೆಯಲ್ಲಿ ಇನ್ನು ಮುಂದೆ ಶವಗಳ ನಿರ್ವಹಣೆಗೆ ವಿಧಿವಿಜ್ಞಾನ ಮತ್ತು ವಿಮ್ಸ್ನ ನುರಿತ ತಂಡವನ್ನು ನೇಮಕ ಮಾಡಿದೆ.
ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಒಂದೇ ಗುಂಡಿಯಲ್ಲಿ ಎರಡು ಸೋಂಕಿತರ ಶವ, ತನಿಖೆಗೆ ಡಿಸಿ ಆದೇಶ
ಬಳ್ಳಾರಿ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ವೇಳೆ ಒಂದೇ ಗುಂಡಿಗೆ ಸೋಂಕಿತರ ಎರಡೆರಡು ಮೃತದೇಹ ಹಾಕಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿಯವರು ಸೋಂಕಿತರ ಮೃತದೇಹವನ್ನು ದರದರನೆ ಎಳೆದು ಗುಂಡಿಗೆ ಎಸೆದಿದ್ದರು. ಇದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು.