ಭಾರತದ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್.. ಚೀನಾಗೇ ತಿರುಗುಬಾಣವಾದ ಚೀನಾ ತಂತ್ರ!
ಚೀನಾ ಜತೆಗೆ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗುತ್ತಿದ್ದಂತೆ ಚೀನಾದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಜನರ ಭಾವನೆಗಳನ್ನ ಗಮನಿಸಿದ ಕೇಂದ್ರ ಸರ್ಕಾರ ಚೀನಾಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರಂಗವಾಗಿಯೇ ಚೀನಾ ಮೂಲದ 59 ಌಪ್‌ಗಳನ್ನ ಬ್ಯಾನ್ ಮಾಡಿದೆ. ಆದ್ರೆ ಸರ್ಕಾರವೇನೋ ಈ ಌಪ್‌ಗಳನ್ನ ಬ್ಯಾನ್ ಮಾಡಿತು. ಆದ್ರೆ ಈ ಌಪ್ ಬ್ಯಾನ್ ವರ್ಕ್ ಆಗೋದು ಹೇಗೆ? ಬ್ಯಾನ್ ಆದ ಌಪ್‌ಗಳು ಕಾರ್ಯನಿರ್ವಹಿಸದಂತೆ ತಡೆಯೋ ವಿಧಾನ ಏನು ಮತ್ತು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಿಗೆ […]
ಚೀನಾ ಜತೆಗೆ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗುತ್ತಿದ್ದಂತೆ ಚೀನಾದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಜನರ ಭಾವನೆಗಳನ್ನ ಗಮನಿಸಿದ ಕೇಂದ್ರ ಸರ್ಕಾರ ಚೀನಾಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರಂಗವಾಗಿಯೇ ಚೀನಾ ಮೂಲದ 59 ಌಪ್‌ಗಳನ್ನ ಬ್ಯಾನ್ ಮಾಡಿದೆ.
ಆದ್ರೆ ಸರ್ಕಾರವೇನೋ ಈ ಌಪ್‌ಗಳನ್ನ ಬ್ಯಾನ್ ಮಾಡಿತು. ಆದ್ರೆ ಈ ಌಪ್ ಬ್ಯಾನ್ ವರ್ಕ್ ಆಗೋದು ಹೇಗೆ? ಬ್ಯಾನ್ ಆದ ಌಪ್‌ಗಳು ಕಾರ್ಯನಿರ್ವಹಿಸದಂತೆ ತಡೆಯೋ ವಿಧಾನ ಏನು ಮತ್ತು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಚೀನಾ ಮೂಲದ 59 ಌಪ್‌ಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದ್ದೇ ತಡ, ಕೆಂದ್ರ ಸರ್ಕಾರದ ಗೃಹ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಌಂಡ್ ಇನ್‌ಫಾರ್ಮೇಶನ್ ಮಿನಿಸ್ಟ್ರೀಗಳು ಜಂಟಿ ಕಾರ್ಯಾಚರಣೆಗಿಳಿದಿವೆ. ಈ ಸಂಬಂಧ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳಾದ ಗೂಗಲ್, ಐಓಎಸ್ ಸೇವೆ ಕಲ್ಪಿಸುವ ಌಪಲ್ ಸಂಪರ್ಕಿಸಿ ಭಾರತ ಸರ್ಕಾರದ ನಿರ್ಧಾರವನ್ನ ತಿಳಿಸಿವೆ. ಜೊತೆಗೆ ಈ 59 ಚೀನಾ ಌಪ್‌ಗಳನ್ನು ಬ್ಲಾಕ್ ಮಾಡುವಂತೆ ತಿಳಿಸಿವೆ.
ತುಟಿ ಪಿಟಿಕ್ ಅನ್ನದೇ ಭಾರತದ ಸೂಚನೆ ಪಾಲಿಸಿದ ಗೂಗಲ್ ಭಾರತ ಸರ್ಕಾರದ ಸೂಚನೆಯನ್ನ ಚಾಚೂ ತಪ್ಪದೇ ಪಾಲಿಸಿದ ಗೂಗಲ್, ತನ್ನ ಗೂಗಲ್ ಪ್ಲೇ ಸ್ಟೋರ್‌ನಿಂದ ಭಾರತದ ವ್ಯಾಪ್ತಿಯಲ್ಲಿ ಎಲ್ಲಾ 59 ಌಪ್‌ಗಳನ್ನ ಬ್ಲಾಕ್ ಮಾಡಿದೆ. ಹಾಗೇನೇ ಌಪಲ್ ಕೂಡಾ ತನ್ನ ಐಓಸ್‌ನಲ್ಲಿ ಬ್ಲಾಕ್ ಮಾಡೋ ಪ್ರೊಸೆಸ್‌ಗೆ ಕೈ ಹಾಕಿದೆ. ಈ ಸಂಬಂಧ ಅಮೆರಿಕದಲ್ಲಿರುವ ತನ್ನ ಹೆಡ್‌ಕ್ವಾರ್ಟರ್ ಜೊತೆ ಅದಾಗಲೇ ನಿರಂತರ ಸಂವಹನದಲ್ಲಿದೆ.
ಇದು ಮೊದಲನೇ ಹಂತವಾದ್ರೆ, ಎರಡನೇ ಹಂತವಾಗಿ ಇನ್ನು ಮುಂದೆ ಯಾವುದೇ ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಬ್ಯಾನ್ ಆದ ಌಪ್‌ಗಳು ಡೌನ್‌ಲೋಡ್ ಆಗದ ಹಾಗೇ ಮಾಡೋದು. ಮತ್ತೊಂದು ಈಗಾಗಲೇ ಡೌನ್‌ಲೋಡ್ ಆಗಿರುವ ಮೊಬೈಲ್‌ಗಳಲ್ಲಿ ಈ ಌಪ್‌ಗಳು ಕಾರ್ಯನಿರ್ವಹಿಸದ ಹಾಗೇ ಮಾಡೋದು. ಈ ಸಂಬಂಧ ಕೇಂದ್ರ ಸಂವಹನ ಸಚಿವಾಲಯ ತನ್ನ ಪಾಲಿನ ಕೆಲಸ ಶುರು ಹಚ್ಚಿಕೊಂಡಿದೆ.
ಬ್ಯಾನ್ ಆದ ಆಪ್‌ಗಳಿಗೆ ಇಂಟರ್‌ನೆಟ್ ಸಿಗದ ಹಾಗೆ ಬ್ಲಾಕ್! ಗೃಹ ಸಚಿವಾಲಯದ ಸೂಚನೆ ಸಿಗುತ್ತಿದ್ದಂತೆ ಕಾರ್ಯೋನ್ಮುಖವಾದ ಸಂವಹನ ಸಚಿವಾಲಯ ಇಂಟರ್‌ನೆಟ್ ಸೇವೆ ಒದಗಿಸುವ ಮತ್ತು ದೂರವಾಣಿ ಸೇವೆ ಕಲ್ಪಿಸುವ ಸಂಸ್ಥೆಗಳಿಗೆ ಬ್ಯಾನ್ ಆದ ಌಪ್‌ಗಳಿಗೆ ಇಂಟರ್‌ನೆಟ್‌ನ್ನು ಪೂರೈಸದಂತೆ ಸೂಚಿಸಿದೆ. ಹೀಗಾಗಿ ಇನ್ನು ಮೇಲೆ ಬ್ಯಾನ್ ಆಗಿರುವ ಌಪ್‌ಗಳಿಗೆ ಭಾರತದಲ್ಲಿ ಇಂಟರ್‌ನೆಟ್ ಸೇವೆ ಸಿಗುವುದಿಲ್ಲ. ಅಂದ್ರೆ ಈ ಌಪ್‌ಗಳಿಗೆ ಇಂಟರ್‌ನೆಟ್ ಸಿಗದ ಹಾಗೇ ಇಂಟರ್‌ನೆಟ್ ಗೇಟ್‌ನಲ್ಲಿಯೇ ಲಾಕ್ ಮಾಡಲಾಗುತ್ತೆ. ಅಲ್ಲಿಗೆ ಕಥೆ ಮುಗೀತು. ಖೇಲ್ ಖತಂ, ದುಖಾನ್ ಬಂದ್!
ಇಲ್ಲಿ ಗಮನಿಸಬೇಕಾದ ವಿಷಯವಂದ್ರೆ, ಈ ಹಿಂದೆ ಕೂಡಾ ಕೇಂದ್ರ ಸರ್ಕಾರ ಕೆಲ ಆಯ್ದ ಪೋರ್ನ್ ಸೈಟ್‌ಗಳನ್ನ ಬ್ಲಾಕ್ ಮಾಡಲು ಇದೇ ತಂತ್ರ ಅಳವಡಿಸಿಕೊಂಡು ಯಶಸ್ವಿಯಾಗಿತ್ತು. ಈಗ ಬ್ಯಾನ್ ಆಗಿರುವ ಌಪ್‌ಗಳಿಗೂ ಅದೇ ತಂತ್ರ ಅಳವಡಿಸಿದೆ.
ಚೀನಾಗೇ ತಿರುಗುಬಾಣವಾದ ಚೀನಾ ತಂತ್ರ ಅಂದ ಹಾಗೆ ಈ ತಂತ್ರ ಪ್ರಯೋಗಿಸಿದ ದೇಶಗಳಲ್ಲಿ ಭಾರತವೇನೂ ಮೊದಲ ದೇಶವಲ್ಲ. ಭಾರತಕ್ಕೂ ಮೊದಲೇ ಚೀನಾ ಈ ತಂತ್ರವನ್ನ ತನ್ನ ದೇಶದಲ್ಲಿಯೇ ಅಳವಡಿಸಿಕೊಂಡಿದೆ. ಚೀನಾ ತನ್ನ ದೇಶದ ನೀತಿ ಪಾಲಿಸದ ಅದ್ರಲ್ಲೂ ಪ್ರಮುಖವಾಗಿ ಗೂಗಲ್ ಮತ್ತು ಫೇಸ್‌ಬುಕ್ ಆಪ್‌ಗಳನ್ನ ಡ್ರಾಗನ್ ಹೀಗೆ ಬ್ಲಾಕ್ ಮಾಡಿದೆ. ಇಷ್ಟೇ ಅಲ್ಲ ಪ್ರಮುಖ ಅರಬ್ ರಾಷ್ಟ್ರಗಳೂ ಕೂಡಾ ಈ ತಂತ್ರ ಅನುಸರಿಸಿವೆ. ಯುಎಇನಲ್ಲಿ ವಾಟ್ಸ್‌ಆಪ್‌ನಲ್ಲಿ ಕೇವಲ ಸಂದೇಶ ಮಾತ್ರ ಕಳಿಸಬಹುದು. ವಾಟ್ಸ್‌ಆಪ್ ಕಾಲ್ ಮಾಡುವಂತಿಲ್ಲ. ಅದನ್ನ ಅಲ್ಲಿ ಇದೇ ರೀತಿಯಾಗಿ ನಿಷೇಧಿಸಲಾಗಿದೆ.
Published On - 6:56 pm, Tue, 30 June 20