ಕೊವಿಡ್ ಲಸಿಕೆ: ಇಂದು 4 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡುವ ಅಭಿಯಾನ..

|

Updated on: Jan 17, 2021 | 10:13 AM

ಇಂದು 4 ಖಾಸಗಿ ಆಸ್ಪತ್ರೆಗಳಿಂದ 6 ಸಾವಿರ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಅಭಿಯಾನ ಆಯೋಜಿಸಲಾಗಿದೆ.

ಕೊವಿಡ್ ಲಸಿಕೆ: ಇಂದು 4 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡುವ ಅಭಿಯಾನ..
ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿರುವುದು
Follow us on

ಬೆಂಗಳೂರು: ನಗರದಲ್ಲಿ ಇಂದು ಸಹ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲ್ಲಿದೆ. ಆದರೆ ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಇರೋದಿಲ್ಲ. ಬದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಇಂದು 4 ಖಾಸಗಿ ಆಸ್ಪತ್ರೆಗಳಿಂದ 6 ಸಾವಿರ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಅಭಿಯಾನ ಆಯೋಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳಾದ ಮಣಿಪಾಲ್ ಆಸ್ಪತ್ರೆ, ಕಾಕ್ಸ್ ಟೌನ್ ಆಸ್ಪತ್ರೆ, ಪಾಲಿಕೆಯ ಹೆರಿಗೆ ಆಸ್ಪತ್ರೆ, ಸೆಂಟ್ ಫಿಲೋಮಿನಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಅಭಿಯಾನ ನಡೆಯಲಿದೆ.

ಎಲ್ಲಿ ಎಷ್ಟು ಜನರಿಗೆ ಲಸಿಕೆ?
ಮಣಿಪಾಲ್: 4052 ಆರೋಗ್ಯ ಸಿಬ್ಬಂದಿ
ಕಾಕ್ಸ್ ಟೌನ್ ಹೆರಿಗೆ ಆಸ್ಪತ್ರೆ: 98
ಸೆಂಟ್ ಫಿಲೋಮಿನಾ: 700
ಬ್ಯಾಪ್ಟಿಸ್ಟ್: 1376 ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡುವಿಕೆ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ನಿನ್ನೆ ರಾಜ್ಯದ್ಯಂತ ನಡೆದ ಲಸಿಕೆ ನೀಡುವ ಅಭಿಯಾನ ಪ್ರಮಾಣ ಕೇವಲ 62 ಪರ್ಸೆಂಟ್ ಆಗಿತ್ತು. ಹೀಗಾಗಿ ಇವತ್ತು ಖಾಸಾಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸಕ್ಸಸ್ ಆಗುವ ನಿರೀಕ್ಷೆಯಿದೆ.

ಕೊರೊನಾ ಲಸಿಕೆ ಪಡೆದವರು ಮದ್ಯ ಸೇವಿಸಬೇಡಿ: ತಜ್ಞರ ಎಚ್ಚರಿಕೆ

Published On - 9:21 am, Sun, 17 January 21