ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ನಲ್ಲಿಡಲಾಗಿದೆ. ಭಾರತದಲ್ಲಿ ಲಾಕ್ಡೌನ್ ಹೀಗೆ ಮುಂದುವರಿದರೆ ಕೊರೊನಾಗಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುತ್ತಾರೆ ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.
ಭಾರತದಲ್ಲಿ ಬೇರೆ ಬೇರೆ ಕಾರಣಗಳಿಂದ 1 ವರ್ಷಕ್ಕೆ 90 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಆದರೆ ಇಂಡಿಯಾದಲ್ಲಿ ಕೊರೊನಾದಿಂದ 2 ತಿಂಗಳಲ್ಲಿ 1 ಸಾವಿರ ಜನ ಮೃತಪಟ್ಟಿದ್ದಾರೆ. ಮಿಲಿಯನ್ ಗಟ್ಟಲೇ ಜನರಿಗೆ ಸರಿಪಡಿಸಲಾಗದ ನಷ್ಟ ಸಂಭವಿಸಲಿದೆ. ಈ ಲಾಕ್ಡೌನ್ ದೇಶವನ್ನು 3 ವರ್ಷಗಳ ಹಿಂದಕ್ಕೆ ತಳ್ಳಲಿದೆ.
ಭಾರತ ಲಾಕ್ ಡೌನ್ ನಲ್ಲಿ ದೀರ್ಘಕಾಲ ಮುಂದುವರಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್ ಜೀವನದ ಭಾಗವಾಗಲಿದೆ. ಭಾರತದಲ್ಲಿ ಕೊರೊನಾದಿಂದ ಸಾವಿನ ಪ್ರಮಾಣ ಶೇಕಡಾ 0.25-0.5 ರಷ್ಟು ಮಾತ್ರ ಇದೆ. ಇದರಲ್ಲಿ ಶೇಕಡಾ 25 ರಷ್ಟು ಮಂದಿ ವಾಯು ಮಾಲಿನ್ಯದಿಂದ ಮೃತಪಡುತ್ತಿದ್ದಾರೆ. ಇದನ್ನು ಕಳೆದ 2 ತಿಂಗಳಲ್ಲಿ ಮೃತಪಟ್ಟ 1 ಸಾವಿರ ಜನರ ಸಾವಿಗೆ ಹೋಲಿಸಿ ನೋಡಿದಾಗ ಗಾಬರಿಯಾಗುವಂತಿಲ್ಲ ಎಂದರು.
Published On - 4:33 pm, Thu, 30 April 20