ಹುಬ್ಬಳ್ಳಿ: ಏಕಾಏಕಿ ಹತ್ತಿ ಖರೀದಿ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಹುಬ್ಬಳ್ಳಿ ರೈತರು ಧರಣಿ ನಡೆಸಿದ್ದಾರೆ. ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ ರೈತರು ಪ್ರತಿಭಟನೆ ಮಾಡಿದ್ದಾರೆ.
ತಾರಿಹಾಳ ಹತ್ತಿ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಘಟನೆ ನಡೆದಿದೆ. ಸಂಜೆ ಏಕಾಏಕಿ ಹತ್ತಿ ಖರೀದಿ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡು ರೈತರು ಕಚೇರಿಯನ್ನು ಲಾಕ್ ಮಾಡಿದ್ದಾರೆ. ಕಚೇರಿ ಒಳಗೆ ಎಪಿಎಂಸಿ ಅಧಿಕಾರಿಗಳಾದ ಪ್ರದೀಪ್, ಪ್ರಕಾಶ್ಗೆ ದಿಗ್ಬಂಧನ ಹಾಕಿದ್ದಾರೆ.
ಕಳೆದ 3 ಗಂಟೆಯಿಂದ ಕೂಡಿ ಹಾಕಿ ರೈತರು ಪ್ರಭಟನೆ ನಡೆಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹತ್ತಿ ಖರೀದಿ ಕೇಂದ್ರದ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ ಫೋಲಿಸರು ಸ್ಥಳಕ್ಕೆ ಬರುತ್ತಿಲ್ಲ.
ಇನ್ನು, ಪೊಲೀಸರು ಬಂದರೂ ಯಾರೊಬ್ಬರೂ ಕಚೇರಿ ಒಳಗೆ ಹೋಗದಂತೆ ನೋಡಿಕೊಳ್ಳಲು ಹತ್ತಿ ತುಂಬಿದ ಟ್ರಾಕ್ಟರ್ಗಳನ್ನು ಅಧಿಕಾರಿಗಳನ್ನು ಕೂಡಿ ಹಾಕಿದ ಕಚೇರಿಗೆ ಅಡ್ಡಲಾಗಿ ನಿಲ್ಲಿಸಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಈಗ ಹುಬ್ಬಳ್ಳಿ ರೈತರು ಇದೇ ಮಾರ್ಗ ಅನುಸರಿಸಿದ್ದು, ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಿಚಿತರಿಂದ ಹಲ್ಲೆ: 4 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು