ಮುಂದಿನ 24 ಗಂಟೆಗಳಲ್ಲಿ ‘ಸೈಕ್ಲೋನ್ ಗೇಟಿ’ ಉತ್ತರ ತಮಿಳುನಾಡು ಕರಾವಳಿಯನ್ನು ಅಪ್ಪಳಿಸಲಿದೆ: ಐಎಮ್​ಡಿ

|

Updated on: Nov 23, 2020 | 6:48 PM

ಬಂಗಾಳ ಕೊಲ್ಲಿಯ ನೈರುತ್ಯ ಭಾಗದ ಮೇಲೆ ಉಂಟಾಗಲಿರವ ಕಡಿಮೆ ಒತ್ತಡದಿಂದ (ಡಿಪ್ರೆಷನ್) ಭಾರಿ ಸ್ವರೂಪದ ಚಂಡಮಾರುತವೊಂದು ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಮತ್ತು ಪುದುಚೆರಿಯ ಕರಾವಳಿಯನ್ನು ಅಪ್ಪಳಸಲಿದ್ದು, ಸದರಿ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ಜನ ಎಚ್ಚರದಿಂದರಬೇಕೆಂದು ತಮಿಳನಾಡಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ತೀವ್ರ ಸ್ವರೂಪದ ಈ ಚಂಡಮಾರುತವನ್ನು ‘ಗೇಟಿ’ ಎಂದು ಕರೆಯಲಾಗಿದ್ದು, ನವೆಂಬರ್ 25 ಮತ್ತು 25 ರ ನಡುವೆ ಪುದುಚೆರಿಯ ಕರೈಕಲ್ ಮತ್ತು ಉತ್ತರ ತಮಿಳುನಾಡಿನ ಮಮ್ಮಲಪುರಂ ನಡುವೆ ಅಪ್ಪಳಸಿಲಿದೆಯೆಂದು ತಮಿಳುನಾಡು ಹವಾಮಾನ ಇಲಾಖೆ […]

ಮುಂದಿನ 24 ಗಂಟೆಗಳಲ್ಲಿ ‘ಸೈಕ್ಲೋನ್ ಗೇಟಿ’ ಉತ್ತರ ತಮಿಳುನಾಡು ಕರಾವಳಿಯನ್ನು ಅಪ್ಪಳಿಸಲಿದೆ: ಐಎಮ್​ಡಿ
Follow us on

ಬಂಗಾಳ ಕೊಲ್ಲಿಯ ನೈರುತ್ಯ ಭಾಗದ ಮೇಲೆ ಉಂಟಾಗಲಿರವ ಕಡಿಮೆ ಒತ್ತಡದಿಂದ (ಡಿಪ್ರೆಷನ್) ಭಾರಿ ಸ್ವರೂಪದ ಚಂಡಮಾರುತವೊಂದು ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಮತ್ತು ಪುದುಚೆರಿಯ ಕರಾವಳಿಯನ್ನು ಅಪ್ಪಳಸಲಿದ್ದು, ಸದರಿ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ಜನ ಎಚ್ಚರದಿಂದರಬೇಕೆಂದು ತಮಿಳನಾಡಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

ತೀವ್ರ ಸ್ವರೂಪದ ಈ ಚಂಡಮಾರುತವನ್ನು ‘ಗೇಟಿ’ ಎಂದು ಕರೆಯಲಾಗಿದ್ದು, ನವೆಂಬರ್ 25 ಮತ್ತು 25 ರ ನಡುವೆ ಪುದುಚೆರಿಯ ಕರೈಕಲ್ ಮತ್ತು ಉತ್ತರ ತಮಿಳುನಾಡಿನ ಮಮ್ಮಲಪುರಂ ನಡುವೆ ಅಪ್ಪಳಸಿಲಿದೆಯೆಂದು ತಮಿಳುನಾಡು ಹವಾಮಾನ ಇಲಾಖೆ ಮುಖ್ಯಸ್ಥರಾದ ಎಸ್ ಬಾಲಚಂದರ್ ಸುದ್ದಿಸಂಸ್ಥೆಯೊದಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

‘‘ಬಂಗಾಳ ಕೊಲ್ಲಿ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡವು ಭಾರಿ ಸ್ವರೂಪದ ಚಂಡಮಾರುತವಾಗಿ ಮಾರ್ಪಟ್ಟು ನವೆಂಬರ 25ರಂದು ತಮಿಳುನಾಡು ಮತ್ತು ಪುದುಚೆರಿ ಕರಾವಳಿ ಭಾಗವನ್ನು ಅಪ್ಪಳಿಸಲಿದೆ. ಹಾಗಾಗಿ, ಆ ಕರಾವಳೀ ಭಾಗದಲ್ಲಿ ವಾಸವಾಗಿರುವ ಜನ ಎಚ್ಚರದಿಂದರಬೇಕು ಮತ್ತು ಹವಾಮಾನ ಇಲಾಖೆ ನೀಡುವ ಯಾವುದೇ ಸಲಹೆಯನ್ನು ಅಸಡ್ಡೆ ಮಾಡಬಾರದು,’’ ಎಂದು ಬಾಲಚಂದರ್ ಹೇಳಿದ್ದಾರೆ.

ನವೆಂಬರ 24 ಮತ್ತು 25ರಂದು ಮೀನುಗಾರರಾಗಲೀ, ಬೋಟ್ ಮತ್ತು ಹಡಗುಗಳಾಗಲೀ ಸಮುದ್ರಕ್ಕೆ ಇಳಯುವ ಸಾಹಸ ಮಾಡಬಾರದೆಂದು ಬಾಲಚಂದರ್ ಎಚ್ಚರಿಸಿದ್ದಾರೆ.

Published On - 6:44 pm, Mon, 23 November 20