‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ

ಟೀಂ ಇಂಡಿಯಾ ಆಟಗಾರರು ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಈ ಮಧ್ಯೆ ವಿದೇಶಿ ಸರ್ಕಾರವೊಂದು ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದೆ.

ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ
ಟೀಂ ಇಂಡಿಯಾ ಆಟಗಾರರು
Edited By:

Updated on: Jan 03, 2021 | 2:55 PM

ಟೀಂ ಇಂಡಿಯಾ ಸದ್ಯ ಆಸ್ಟ್ರೇಲಿಯಾ ನೆಲದಲ್ಲಿದ್ದು, ಏಕದಿನ, ಟಿ-20 ಸರಣಿ ಪೂರ್ಣಗೊಳಿಸಿದೆ. ಸದ್ಯ, ಟೆಸ್ಟ್​ ಸರಣಿಯ ಎರಡು ಪಂದ್ಯಗಳನ್ನು ಆಡಿದ್ದು, ಇನ್ನೂ ಎರಡು ಟೆಸ್ಟ್​​ಗಳನ್ನು ಆಡಬೇಕಿದೆ. ಮೂರನೇ ಟೆಸ್ಟ್​ಗೂ ಮೊದಲು ರೋಹಿತ್​ ಶರ್ಮಾ ಸೇರಿ ಐದು ಟೀಂ ಇಂಡಿಯಾ ಆಟಗಾರರು ಕೊವಿಡ್​ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಇದೆ. ಈ ಮಧ್ಯೆ, ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರುವುದೇ ಬೇಡ ಎನ್ನುವ ಸಂದೇಶವನ್ನು ಕ್ವೀನ್ಸ್​ಲೆಂಡ್​ ಸರ್ಕಾರ ರವಾನೆ ಮಾಡಿದೆ.

ಕೊನೆಯ ಟೆಸ್ಟ್​​ ಪಂದ್ಯ, ಕ್ವೀನ್ಸ್​ಲೆಂಡ್​​ನ ಬ್ರಿಸ್​ಬೇನ್​ನಲ್ಲಿ ನಡೆಯಲಿದೆ. ಆ ದೇಶದ ಕಠಿಣ ಕೊರೊನಾ ನಿಯಮದಿಂದ ಅಲ್ಲಿಗೆ ತೆರಳಲು ಟೀಂ ಇಂಡಿಯಾ ಹಿಂದೇಟು ಹಾಕುತ್ತಿದೆ. ಸಿಡ್ನಿಗೆ ಬರುವುದಕ್ಕೂ ಮೊದಲು ನಾವು ದುಬೈನಲ್ಲಿ 14 ದಿನ ಕ್ವಾರಂಟೈನ್​ ಆಗಿದ್ದವು. ಆಸ್ಟ್ರೇಲಿಯಾ ನೆಲದಲ್ಲಿ ಮತ್ತೆ 14 ದಿನ ಕ್ವಾರಂಟೈನ್​ ಆಗಿದ್ದೇವೆ. ಈಗ ಬ್ರಿಸ್​ಬೇನ್​ನಲ್ಲಿ ಪಂದ್ಯ ಆಡಬೇಕು ಎಂದರೆ ಮತ್ತೆ ಕ್ವಾರಂಟೈನ್​ ಆಗಬೇಕು ಎನ್ನುತ್ತಿದ್ದಾರೆ. ಕೊನೆಯ ಟೆಸ್ಟ್​​ ಆಸ್ಟ್ರೇಲಿಯಾ ನೆಲದಲ್ಲೇ ನಡೆಯಲಿ.  ಅದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ. ಈಗ ಮತ್ತೆ ಕ್ವಾರಂಟೈನ್​ ಆಗುವುದು ಸುಲಭದ ಮಾತಲ್ಲ ಎಂದು ಟೀಂ ಇಂಡಿಯಾ ಅಭಿಪ್ರಾಯಪಟ್ಟಿತ್ತು.

ಇದಕ್ಕೆ, ಕ್ವೀನ್ಸ್​ಲೆಂಡ್​ನ ಆರೋಗ್ಯ ಸಚಿವೆ ರೋಸ್​ ಬೇಟ್ಸ್​ ತಿರುಗೇಟು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರರು ಕೊರೊನಾ ನಿಯಮ ಪಾಲಿಸುವುದಿಲ್ಲ ಎಂದಾದರೆ ಅವರು ಬರುವುದೇ ಬೇಡ. ನಿಯಮ ಎಂಬುದು ಎಲ್ಲರಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.

India vs Australia Test Series | ಪೂಜಾರಾ ಸ್ಥಾನದಲ್ಲಿ ರೋಹಿತ್ ಶರ್ಮರನ್ನು ಉಪನಾಯಕನೆಂದು ಘೋಷಿಸಿದ ಬಿಸಿಸಿಐ

Published On - 2:54 pm, Sun, 3 January 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us