ಬೆಂಗಳೂರಿಗೆ ‘ಸ್ಯಾರಿ’ ಸಂಕಟ, ಟ್ರಾವೆಲ್ ಹಿಸ್ಟರಿ ಹೇಳದೆ ವೈದ್ಯರ ಜೊತೆ ಚೆಲ್ಲಾಟ! 

|

Updated on: Apr 18, 2020 | 11:48 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದ ರೆಡ್ ಜೋನ್ ಬೆಂಗಳೂರಿಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೊವಿಡ್ 19 ಪಾಸಿಟಿವ್ ಕೇಸ್​ಗಳು ದಿನೇ ದಿನೇ ಹೆಚ್ಚುತ್ತಿವೆ. ಒಂದ್ಕಡೆ ಕೊರೊನಾ ಕೇಸ್​ಗಳನ್ನ ಟ್ರ್ಯಾಕ್​ ಮಾಡಲಾಗದೇ ವೈದ್ಯರ ಪರದಾಡುವಂತಹ ಸ್ಥಿತಿ ಇದೆ. ಉಸಿರಾಟದ ತೊಂದರೆ ಅಂತಾ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಈ ವೇಳೆ ವೈದ್ಯರೇ ಕೈಮುಗಿದು ಕೇಳಿದ್ರೂ ಕೊರೊನಾ ಸೋಂಕಿತರು ಟ್ರಾವೆಲ್ ಹಿಸ್ಟರಿ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮಾಹಿತಿ ಬಿಟ್ಟು ಕೊಡದೇ ಸತಾಯಿಸುತ್ತಿರುವ ಕೆಲ ರೋಗಿಗಳು ವೈದ್ಯರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಉಸಿರಾಟದ […]

ಬೆಂಗಳೂರಿಗೆ ‘ಸ್ಯಾರಿ’ ಸಂಕಟ, ಟ್ರಾವೆಲ್ ಹಿಸ್ಟರಿ ಹೇಳದೆ ವೈದ್ಯರ ಜೊತೆ ಚೆಲ್ಲಾಟ! 
Follow us on

ಬೆಂಗಳೂರು: ಮಹಾಮಾರಿ ಕೊರೊನಾದಿಂದ ರೆಡ್ ಜೋನ್ ಬೆಂಗಳೂರಿಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೊವಿಡ್ 19 ಪಾಸಿಟಿವ್ ಕೇಸ್​ಗಳು ದಿನೇ ದಿನೇ ಹೆಚ್ಚುತ್ತಿವೆ. ಒಂದ್ಕಡೆ ಕೊರೊನಾ ಕೇಸ್​ಗಳನ್ನ ಟ್ರ್ಯಾಕ್​ ಮಾಡಲಾಗದೇ ವೈದ್ಯರ ಪರದಾಡುವಂತಹ ಸ್ಥಿತಿ ಇದೆ.

ಉಸಿರಾಟದ ತೊಂದರೆ ಅಂತಾ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಈ ವೇಳೆ ವೈದ್ಯರೇ ಕೈಮುಗಿದು ಕೇಳಿದ್ರೂ ಕೊರೊನಾ ಸೋಂಕಿತರು ಟ್ರಾವೆಲ್ ಹಿಸ್ಟರಿ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮಾಹಿತಿ ಬಿಟ್ಟು ಕೊಡದೇ ಸತಾಯಿಸುತ್ತಿರುವ ಕೆಲ ರೋಗಿಗಳು ವೈದ್ಯರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.

ಉಸಿರಾಟದ ತೊಂದರೆ ಅಂತಾ ಆಸ್ಪತ್ರೆಗೆ ಬರೋ ರೋಗಿಗಳಿಗೆ ಕೊರೊನಾ ಇದೆ ಅನ್ನೋದು 2 ದಿನ ಗೊತ್ತಾಗಲ್ಲ. ಹಾಗಂತ ಮಾಮೂಲಿ ವಾರ್ಡ್​ಗೆ ಕಳುಹಿಸಿದರೂ ದೊಡ್ಡ ಆಪತ್ತು. ವೈದ್ಯರು ಕೂಡ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳದೇ ಚಿಕಿತ್ಸೆ ನೀಡುತ್ತಾರೆ. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ಬಂದ ಮೇಲೆ ಚಿಕಿತ್ಸೆ ನೀಡಿದ ವೈದ್ಯರಲ್ಲೂ ಆತಂಕ ಶುರುವಾಗುತ್ತದೆ. ಬೆಂಗಳೂರಿನಲ್ಲಿ ಇಂಥ ಕೇಸ್​ಗಳೇ ಅತಿ ಹೆಚ್ಚು ದಾಖಲಾಗಿವೆ.

ಟ್ರಾವೆಲ್ ಹಿಸ್ಟರಿ ಹೇಳದೆ ವೈದ್ಯರ ಜೊತೆ ಚೆಲ್ಲಾಟ..!
ಬೆಂಗಳೂರಿನಲ್ಲಿ ಸುಮಾರು 20 ರೋಗಿಗಳು ಟ್ರಾವೆಲ್ ಹಿಸ್ಟರಿ ಹೇಳದೇ ಸುಳ್ಳು ಹೇಳಿದ್ದಾರಂತೆ. SARI (ಸೀರಿಯಸ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್) ಅಂತಾ ಬಂದವರಲ್ಲೇ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆ ಇದ್ದವ್ರಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ತಗುಲಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಹೊಸದೊಂದು SARI ಬ್ಲಾಕ್ ಓಪನ್ ಮಾಡಲಾಗಿದೆ. ಹೀಗಾಗಿಯೇ ದಯವಿಟ್ಟು ನಿಮ್ಮ ಟ್ರಾವೆಲ್ ಹಿಸ್ಟರಿ ಹೇಳಿ ಸೂಕ್ತ ಚಿಕಿತ್ಸೆ ನೀಡಲು ಅವಕಾಶ ಮಾಡಿ ಅಂತಿದ್ದಾರೆ ವೈದ್ಯರು.