ಆನ್‌ಲೈನ್ ತರಗತಿಗಳನ್ನ ನಡೆಸಬಹುದು, ಆದ್ರೆ ಶುಲ್ಕ ಪಾವತಿ ಕಡ್ಡಾಯವಾ?

ಶಾಲಾ ಶುಲ್ಕ ಪಾವತಿಸದಿದ್ರೆ ಆನ್‌ಲೈನ್ ಕ್ಲಾಸ್ ಬಂದ್ ಮಾಡ್ತೀವಿ ಅಂತಾ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೆದರಿಕೆ
ಬೆಂಗಳೂರು: ಮಹಾಮಾರಿ ಕೊರೊನಾ ವಕ್ಕರಿಸಿರುವ ಸಮಯದಲ್ಲಿ ಶುಲ್ಕ ಕಟ್ಟಿ ಎಂದು ಒತ್ತಾಯಿಸುವ ಶಾಲೆಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಶುಲ್ಕ ಪಾವತಿಸಬೇಕೆಂದು ಒತ್ತಾಯಿಸುವಂತಿಲ್ಲ. ಆನ್‌ಲೈನ್ ಮೂಲಕ ಪಾಠಪ್ರವಚನಕ್ಕೆ ಅವಕಾಶವಿದೆ. ಆದ್ರೆ, ಆನ್‌ಲೈನ್ ಕ್ಲಾಸ್ ನೆಪದಲ್ಲಿ ಶುಲ್ಕ ಪಡೆಯುವಂತಿಲ್ಲ ಎಂದು ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಕೇವಲ ಕ್ಲಾಸ್ ಮಾತ್ರ ಆನ್ಲೈನ್ನಲ್ಲಿ ನಡೆಸಲು ಅವಕಾಶವಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಖಾಸಗಿ ಶಾಲೆಗಳು ಶುಲ್ಕ ಪಾವತಿ ಕಡ್ಡಾಯ ಮಾಡಬಾರದು. ಒಂದು ವೇಳೆ ಆದೇಶ […]
ಬೆಂಗಳೂರು: ಮಹಾಮಾರಿ ಕೊರೊನಾ ವಕ್ಕರಿಸಿರುವ ಸಮಯದಲ್ಲಿ ಶುಲ್ಕ ಕಟ್ಟಿ ಎಂದು ಒತ್ತಾಯಿಸುವ ಶಾಲೆಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಶುಲ್ಕ ಪಾವತಿಸಬೇಕೆಂದು ಒತ್ತಾಯಿಸುವಂತಿಲ್ಲ. ಆನ್‌ಲೈನ್ ಮೂಲಕ ಪಾಠಪ್ರವಚನಕ್ಕೆ ಅವಕಾಶವಿದೆ. ಆದ್ರೆ, ಆನ್‌ಲೈನ್ ಕ್ಲಾಸ್ ನೆಪದಲ್ಲಿ ಶುಲ್ಕ ಪಡೆಯುವಂತಿಲ್ಲ ಎಂದು ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಕೇವಲ ಕ್ಲಾಸ್ ಮಾತ್ರ ಆನ್ಲೈನ್ನಲ್ಲಿ ನಡೆಸಲು ಅವಕಾಶವಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಖಾಸಗಿ ಶಾಲೆಗಳು ಶುಲ್ಕ ಪಾವತಿ ಕಡ್ಡಾಯ ಮಾಡಬಾರದು. ಒಂದು ವೇಳೆ ಆದೇಶ ಉಲ್ಲಂಘಿಸಿದ್ರೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ, ಸೆಕ್ಷನ್ 3 ರಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.