ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು.
ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ ಅಲ್ಲಿ ನೆರೆದವರ ಮೊಬೈಲ್ನಲ್ಲಿ ಸೆರೆಯಾಗಿದೆ.