‘HDK-DKShi ಜೋಡೆತ್ತು ಈ ಬಾರಿ ಯಾವ ದಾಳ ಉರುಳಿಸ್ತಾರೋ ನೋಡೋಣ’

ಚಿಕ್ಕಬಳ್ಳಾಪುರ: ಹೆಚ್​ಡಿಕೆ-ಡಿಕೆಶಿ ಜೋಡೆತ್ತು ಈ ಬಾರಿ ಯಾವ ದಾಳ ಉರುಳಿಸ್ತಾರೋ ಕಾದು ನೋಡೋಣ ಎಂದು ಅವರಿಬ್ಬರ ಬಗ್ಗೆ ಅನರ್ಹ ಶಾಸಕ ಕೆ.ಸುಧಾಕರ್​ ವ್ಯಂಗ್ಯವಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಅವರು ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದವರು, ಅನುಭವವಿದೆ. ಇನ್ನು ಡಿ.ಕೆ.ಶಿವಕುಮಾರ್​ ದೇಶದ ರಾಜಕಾರಣವನ್ನ ನೋಡಿದವ್ರು. ಅವರಿಬ್ಬರೂ ಯಾವ ತಂತ್ರ ಬಳಸುತ್ತಾರೋ ನೋಡೋಣ ಎಂದು ಡಾ. ಕೆ.ಸುಧಾಕರ್ ಮಾರ್ಮಿಕವಾಗಿ ಹೇಳಿದ್ದಾರೆ. ಇಬ್ಬರೂ ನಾಯಕರು ನಿನ್ನೆಯಿಂದ ಚಿಕ್ಕಬಳ್ಳಾಪುರ […]

HDK-DKShi ಜೋಡೆತ್ತು ಈ ಬಾರಿ ಯಾವ ದಾಳ ಉರುಳಿಸ್ತಾರೋ ನೋಡೋಣ

Updated on: Nov 19, 2019 | 3:43 PM

ಚಿಕ್ಕಬಳ್ಳಾಪುರ: ಹೆಚ್​ಡಿಕೆ-ಡಿಕೆಶಿ ಜೋಡೆತ್ತು ಈ ಬಾರಿ ಯಾವ ದಾಳ ಉರುಳಿಸ್ತಾರೋ ಕಾದು ನೋಡೋಣ ಎಂದು ಅವರಿಬ್ಬರ ಬಗ್ಗೆ ಅನರ್ಹ ಶಾಸಕ ಕೆ.ಸುಧಾಕರ್​ ವ್ಯಂಗ್ಯವಾಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಅವರು ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದವರು, ಅನುಭವವಿದೆ. ಇನ್ನು ಡಿ.ಕೆ.ಶಿವಕುಮಾರ್​ ದೇಶದ ರಾಜಕಾರಣವನ್ನ ನೋಡಿದವ್ರು. ಅವರಿಬ್ಬರೂ ಯಾವ ತಂತ್ರ ಬಳಸುತ್ತಾರೋ ನೋಡೋಣ ಎಂದು ಡಾ. ಕೆ.ಸುಧಾಕರ್ ಮಾರ್ಮಿಕವಾಗಿ ಹೇಳಿದ್ದಾರೆ.

ಇಬ್ಬರೂ ನಾಯಕರು ನಿನ್ನೆಯಿಂದ ಚಿಕ್ಕಬಳ್ಳಾಪುರ ರಣರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೆಡಿಎಸ್ ನಿಂದ ಹೆಚ್ ಡಿಕೆ, ಕಾಂಗ್ರೆಸ್ ನಿಂದ ಡಿಕೆಶಿ ಚುನಾವಣೆ ಪ್ರಚಾರದಲ್ಲಿ ಕ್ಷೇತ್ರದಲ್ಲಿ ಭಾಗಿಯಾಗಿದ್ದಾರೆ.