ತಾರಾ ನಟಿಯರ ನಂತ್ರ.. ಈಗ ತಾರಾ ಹೋಟೆಲ್‌ಗಳಿಗೆ CCB ನೋಟಿಸ್!

ಬೆಂಗಳೂರು: ತಾರಾ ವರ್ಚಸ್ಸಿನ ಚಂದನವನದಲ್ಲಿ ಡ್ರಗ್ಸ್ ದಂಧೆ ನಡೆದಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡು CCB ಕಳೆದೊಂದು ತಿಂಗಳಿಂದ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಕೆಲ ತಾರಾ ನಟ-ನಟಿಯರು, ಡ್ರಗ್​ ಪೆಡ್ಲರ್​ಗಳ ನಂತರ ಸಿಸಿಬಿ ಇದೀಗ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಪಾರ್ಟಿ ನಡೆದಿದ್ದ ಕೆಲವು ಪ್ರತಿಷ್ಟಿತ ಸ್ಟಾರ್ ಹೋಟೆಲ್‌ಗಳಿಗೆ ನೋಟಿಸ್ ನೀಡಲಾರಂಭಿಸಿದೆ. ಆರೋಪಿ ವಿರೇನ್ ಖನ್ನಾ ಮಾಹಿತಿ ಆಧರಿಸಿ ಸಿಸಿಬಿಯಿಂದ ಈ ನೋಟಿಸ್ ಹೊರಬಿದ್ದಿದೆ. ಮುಖ್ಯವಾಗಿ ಪಾರ್ಟಿಗಳ ಸಿಸಿ ಕ್ಯಾಮರಾ ದೃಶ್ಯ ನೀಡುವಂತೆ ನೋಟಿಸ್ ನೀಡಲಾಗಿದೆ. […]

ತಾರಾ ನಟಿಯರ ನಂತ್ರ.. ಈಗ ತಾರಾ ಹೋಟೆಲ್‌ಗಳಿಗೆ CCB ನೋಟಿಸ್!
CCB ಕಚೇರಿ

Updated on: Sep 21, 2020 | 12:12 PM

ಬೆಂಗಳೂರು: ತಾರಾ ವರ್ಚಸ್ಸಿನ ಚಂದನವನದಲ್ಲಿ ಡ್ರಗ್ಸ್ ದಂಧೆ ನಡೆದಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡು CCB ಕಳೆದೊಂದು ತಿಂಗಳಿಂದ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಕೆಲ ತಾರಾ ನಟ-ನಟಿಯರು, ಡ್ರಗ್​ ಪೆಡ್ಲರ್​ಗಳ ನಂತರ ಸಿಸಿಬಿ ಇದೀಗ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಪಾರ್ಟಿ ನಡೆದಿದ್ದ ಕೆಲವು ಪ್ರತಿಷ್ಟಿತ ಸ್ಟಾರ್ ಹೋಟೆಲ್‌ಗಳಿಗೆ ನೋಟಿಸ್ ನೀಡಲಾರಂಭಿಸಿದೆ.

ಆರೋಪಿ ವಿರೇನ್ ಖನ್ನಾ ಮಾಹಿತಿ ಆಧರಿಸಿ ಸಿಸಿಬಿಯಿಂದ ಈ ನೋಟಿಸ್ ಹೊರಬಿದ್ದಿದೆ. ಮುಖ್ಯವಾಗಿ ಪಾರ್ಟಿಗಳ ಸಿಸಿ ಕ್ಯಾಮರಾ ದೃಶ್ಯ ನೀಡುವಂತೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಕ್ಲೌಡ್ ನೈನ್, ಒನ್ ಕ್ಯೂ ಒನ್ ಸೇರಿದಂತೆ ಹಲವು ಹೋಟೆಲ್‌ಗಳಿಗೆ ಸಿಸಿಬಿಯಿಂದ ನೋಟಿಸ್ ರವಾನೆಯಾಗಿದೆ. ಆದಷ್ಟು ಬೇಗ ಸಿಸಿಟಿವಿ ಫೂಟೇಜ್ ತಂದು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸಿಸಿಬಿ ಸೂಚನೆ ನೀಡಿದೆ ಎಂದು ಟಿವಿ9 ಗೆ ಸಿಸಿಬಿ ಮೂಲಗಳಿಂದ ಮಾಹಿತಿ ದೊರೆತಿದೆ.

Published On - 12:10 pm, Mon, 21 September 20