3 ದಿನದಿಂದ ಹಾಸನದ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿರುವ HDK, ಸದನಕ್ಕೂ ಗೈರು
ಹಾಸನ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಳೆದ ಮೂರು ದಿನಗಳಿಂದ ಬೆಂಗಳೂರನ್ನು ತ್ಯಜಿಸಿ ಹಾಸನದ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಮೂರು ದಿನಗಳಿಂದ ಕುಟುಂಬ ಸಮೇತರಾಗಿ ಹಾಸನದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂರು ದಿನಗಳಿಂದ ಯಾರನ್ನೂ ಭೇಟಿ ಮಾಡಿಲ್ಲ. ಯಾರೊಂದಿಗೂ ಸಂಪರ್ಕ ಹೊಂದದೆ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಇಂದು ನಡೆದ ವಿಧಾನ ಮಂಡಲ ಅಧಿವೇಶನ ಕಲಾಪದಲ್ಲೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಗೈರಾಗಿದ್ದರು. ಪ್ರತಿ ದಿನ, ಪ್ರತಿ ಕ್ಷಣ.. ಕೊರೊನಾದಲ್ಲೂ […]
ಹಾಸನ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಳೆದ ಮೂರು ದಿನಗಳಿಂದ ಬೆಂಗಳೂರನ್ನು ತ್ಯಜಿಸಿ ಹಾಸನದ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಮೂರು ದಿನಗಳಿಂದ ಕುಟುಂಬ ಸಮೇತರಾಗಿ ಹಾಸನದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮೂರು ದಿನಗಳಿಂದ ಯಾರನ್ನೂ ಭೇಟಿ ಮಾಡಿಲ್ಲ. ಯಾರೊಂದಿಗೂ ಸಂಪರ್ಕ ಹೊಂದದೆ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಇಂದು ನಡೆದ ವಿಧಾನ ಮಂಡಲ ಅಧಿವೇಶನ ಕಲಾಪದಲ್ಲೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಗೈರಾಗಿದ್ದರು. ಪ್ರತಿ ದಿನ, ಪ್ರತಿ ಕ್ಷಣ.. ಕೊರೊನಾದಲ್ಲೂ ಗಿಜಿಗುಡುವ ಸಿಲಿಕಾನ್ ಸಿಟಿ ಬೆಂಗಳೂರನ್ನು ಬಿಟ್ಟು ಹಾಸನಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.