ಕೊಡಗು: ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತಗುಲಿ 20 ವರ್ಷದ ಹೆಣ್ಣಾನೆ ಮೃತಪಟ್ಟಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಡಿಗೆ ಹೊಂದಿಕೊಂಡಂತೆ ಇರುವ ಕಾಫಿತೋಟಗಳಲ್ಲಿ ಕಾಡಾನೆಗಳ ಸಂಚಾರ ಸಾಮಾನ್ಯ. ಆಹಾರ ಅರಸಿ ತೋಟಕ್ಕೆ ಬಂದಿರುವ ಕಾಡಾನೆಯು ಎತ್ತರದ ಮರದಲ್ಲಿದ್ದ ಸೊಪ್ಪು ಕೀಳಲು ಸೊಂಡಿಲು ಚಾಚಿದಾಗ ತೋಟದಲ್ಲಿ ಹಾದುಹೋಗಿದ್ದ 11 ಕೆ.ವಿ ವಿದ್ಯುತ್ ತಂತಿ ಸ್ಪರ್ಶವಾಗಿದೆ.
ವಿದ್ಯುತ್ ಸ್ಪರ್ಶದ ಆಘಾತದಿಂದ ಆನೆಯು ಸೊಂಡಿಲು ಬೀಸಿ ಎಳೆದಿದ್ದು, ತಂತಿಯು ತುಂಡಾಗಿ ಬಿದ್ದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.