ಮಂಗಳೂರು: ತನ್ನ ಮಾಜಿ ಪ್ರೇಯಸಿಯ ಜೊತೆಗಿದ್ದ ಯುವಕನಿಗೆ ಆಕೆಯ ಮಾಜಿ ಪ್ರಿಯಕರ ಚೂರಿ ಇರಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಹೋಟೆಲ್‌ನಲ್ಲಿ ನಡೆದಿದೆ. ಪ್ರತೀಕ್ಷ್ ಎಂಬಾತನಿಗೆ ತ್ರಿಶೂಲ್ ಮತ್ತು ಗ್ಯಾಂಗ್ ಚೂರಿಯಿಂದ ಅಟ್ಯಾಕ್ ಮಾಡಿದ್ದಾರೆ.
ಯುವತಿ ತನ್ನ ಇಬ್ಬರು ಸ್ನೇಹಿತರ ಜೊತೆ ಮಂಗಳೂರಿನ ಕುಮಾರ್ ಇಂಟರ್ನ್ಯಾಷನಲ್ ಹೋಟೆಲ್ಗೆ ಬಂದಿದ್ದರು. ಈ ವೇಳೆ ಆಕೆಯ ಮಾಜಿ ಪ್ರಿಯಕರ ತ್ರಿಶೂಲ್ ಮತ್ತು ಹೆಲ್ಮೆಟ್ ಧರಿಸಿದ್ದ ಆತನ ಗ್ಯಾಂಗ್ ಏಕಾಏಕಿ ಹೋಟೆಲ್ಗೆ ನುಗ್ಗಿ ಹೆಲ್ಮೆಟ್ನಿಂದ ಮಾಜಿ ಪ್ರೇಯಸಿ ಜೊತೆಗಿದ್ದ ಪ್ರತೀಕ್ಷ್ ಎಂಬಾತನ ಮೇಲೆ ದಾಳಿ ನಡೆಸಿದ್ದಾರೆ.
ಬಳಿಕ ಪ್ರತೀಕ್ಷ್‌ಗೆ 4 ಕಡೆ ಚೂರಿಯಿಂದ ಇರಿದಿದ್ದಾರೆ. 2 ದಿನಗಳ ಹಿಂದೆ ನಡೆದಿರುವ ಘಟನೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರತೀಕ್ಷ್ ಚಿಕಿತ್ಸೆ ಪಡೆಯುತ್ತಿದ್ದಾರೆ.