ರಾಜ್ಯದಲ್ಲಿ ಇಂದಿನಿಂದ ಪೂರ್ಣಪ್ರಮಾಣದ ತರಗತಿ ಆರಂಭ
ರಾಜ್ಯದಲ್ಲಿ ಇಂದಿನಿಂದ ಪೂರ್ಣಪ್ರಮಾಣದ ತರಗತಿ ಆರಂಭವಾಗುತ್ತಿವೆ. 9ರಿಂದ 12ನೇ ತರಗತಿಯ ಮಕ್ಕಳಿಗೆ ಫುಲ್‌ಟೈಂ ಕ್ಲಾಸ್ ಇಂದಿನಿಂದ ಶುರುವಾಗುತ್ತಿದೆ. ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ತರಗತಿ ನಡೆಯಲಿದೆ.
ಬೆಂಗಳೂರು: 9 ತಿಂಗಳ ಬಳಿಕ ರಾಜ್ಯದಲ್ಲಿ ಇಂದಿನಿಂದ ಪೂರ್ಣಪ್ರಮಾಣದ ತರಗತಿ ಆರಂಭವಾಗುತ್ತಿವೆ. 9ರಿಂದ 12ನೇ ತರಗತಿಯ ಮಕ್ಕಳಿಗೆ ಫುಲ್‌ಟೈಂ ಕ್ಲಾಸ್ ಇಂದಿನಿಂದ ಶುರುವಾಗುತ್ತಿದೆ. ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ತರಗತಿ ನಡೆಯಲಿದೆ.
6ರಿಂದ 8ನೇ ತರಗತಿ ಮಕ್ಕಳಿಗೆ ಎಂದಿನಂತೆ ‘ವಿದ್ಯಾಗಮ’ ಕ್ಲಾಸ್ಗಳನ್ನು ತೆಗೆದುಕೊಳ್ಳಲಾಗುತ್ತೆ. ವಿದ್ಯಾರ್ಥಿಗಳು ಮಧ್ಯಾಹ್ನ ಊಟ, ನೀರು ಮನೆಯಿಂದಲೇ ತರಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ಹಾಗೂ ಮಕ್ಕಳು ಪೋಷಕರಿಂದ ಅನುಮತಿ ಪಡೆದು ಆ ಪತ್ರವನ್ನು ಕಡ್ಡಾಯವಾಗಿ ಶಾಲೆಗೆ ತರಬೇಕು. ಪೋಷಕರು ಒಪ್ಪಿದರೆ ಮಾತ್ರ ಮಕ್ಕಳು ಶಾಲೆಗೆ ಬರಬೇಕು. ಜೊತೆಗೆ ವಿದ್ಯಾರ್ಥಿಗಳು ಕೊವಿಡ್ ನೆಗೆಟಿವ್ ರಿಪೋರ್ಟ್ ತರಬೇಕು ಎಂದು ಸರ್ಕಾರ ಸೂಚಿಸಿದೆ.
ಇಷ್ಟುದಿನ SSLC ಮತ್ತು ದ್ವಿತೀಯ ಪಿಯುಸಿಗೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ತರಗತಿ ನಡೆಯುತ್ತಿದ್ದವು. ಆದ್ರೆ ಇಂದಿನಿಂದ 9 ರಿಂದ 12 ರವರೆಗಿನ ವಿದ್ಯಾರ್ಥಿಗಳಿಗೆ ಬೆಳಗ್ಗಿನಿಂದ ಸಂಜೆವರೆಗೂ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಫೆಬ್ರವರಿ 2 ನೇ ವಾರದಲ್ಲಿ ಇನ್ನೊಮ್ಮೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲು ಶಿಕ್ಷಣ ಸಚಿವರು ನಿರ್ಧರಿಸಿದ್ದಾರೆ. ಆ ಸಭೆ ಬಳಿಕ 1 ರಿಂದ 8ನೇ ತರಗತಿಯ ಮಕ್ಕಳಿಗೆ ಶಾಲೆ ಆರಂಭದ ಬಗ್ಗೆ ತೀರ್ಮಾನ ಮಾಡಲಾಗುತ್ತೆ. 1 ರಿಂದ 5ನೇ ತರಗತಿಯ ಮಕ್ಕಳಿಗೆ ಟಿವಿ, ರೇಡಿಯೋ, ಯೂಟ್ಯೂಬ್ ಮೂಲಕ ಬೋಧನೆ ಮುಂದುವರಿಯಲಿದೆ.
ಶಾಲೆ ಪುನರಾರಂಭ ಜನವರಿ 1ಕ್ಕೆ ಫಿಕ್ಸ್; ಯಾವುದೇ ಬದಲಾವಣೆ ಇಲ್ಲ.. ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ
Published On - 7:19 am, Mon, 1 February 21