ಲಕ್ಕುಂಡಿಯಲ್ಲಿ ‘ರತ್ನನ್ ಪ್ರಪಂಚ’ದ ಸೊಬಗು; ಡಾಲಿಯನ್ನು ನೋಡಲು ಮುಗಿಬಿದ್ದ ಮಂದಿ!
ಜಿಲ್ಲೆಯ ಲಕ್ಕುಂಡಿಯಲ್ಲಿ ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರೀಕರಣದ ವೇಳೆ ಟಗರು ಖ್ಯಾತಿಯ ನಟನನ್ನು ನೋಡಲು ಸ್ಥಳೀಯರು ಮುಗಿಬಿದ್ದ ದೃಶ್ಯಗಳು ಸಹ ಕಂಡುಬಂದವು.

ಡಾಲಿಯನ್ನು ನೋಡಲು ಮುಗಿಬಿದ್ದ ಗ್ರಾಮದ ಮಂದಿ
ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರೀಕರಣದ ವೇಳೆ ಟಗರು ಖ್ಯಾತಿಯ ನಟನನ್ನು ನೋಡಲು ಸ್ಥಳೀಯರು ಮುಗಿಬಿದ್ದ ದೃಶ್ಯಗಳು ಸಹ ಕಂಡುಬಂದವು.
ಜಿಲ್ಲೆಯ ಐತಿಹಾಸಿಕ ಸ್ಥಳವಾದ ಲಕ್ಕುಂಡಿಯಲ್ಲಿ ಕಳೆದ 2 ದಿನಗಳಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಗ್ರಾಮದಲ್ಲಿ ಸುಮಾರು 1 ವಾರದ ಕಾಲ ಚಿತ್ರೀಕರಣ ನಡೆಯಲಿರುವ ಹಿನ್ನೆಲೆಯಲ್ಲಿ ನಟ ಧನಂಜಯ ಲಕ್ಕುಂಡಿಯಲ್ಲೇ ಬೀಡು ಬಿಟ್ಟಿದ್ದಾರೆ. ಇಂದು ರವಿವಾರವಾದ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ನೋಡಲು ಜನ ಮುಗಿಬಿದ್ದರು.
Published On - 9:36 pm, Sun, 31 January 21