ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ ಆರೋಪ: ಸಚಿವ ಹೆಚ್.ನಾಗೇಶ್ ವಿರುದ್ದ ಪ್ರಧಾನಿಗೆ ದೂರು ಕೊಟ್ಟ ಅಬಕಾರಿ ಅಧಿಕಾರಿಯ ಪುತ್ರಿ

ಬೆಂಗಳೂರಲ್ಲಿ ಖಾಲಿ ಇರುವ ಜಂಟಿ ಆಯುಕ್ತರ ಹುದ್ದೆಗೆ ಬರಲು ಸಚಿವರ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಅಬಕಾರಿ ಸಚಿವ ಹೆಚ್.ನಾಗೇಶ್ ವರ್ಗಾವಣೆ ಮಾಡಲು ಒಂದು ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಅಧಿಕಾರಿಯ ಪುತ್ರಿ ಪ್ರಧಾನಿ ಮೋದಿ ಕಚೇರಿಗೆ ದೂರು ನೀಡಿದ್ದಾರೆ.

ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ ಆರೋಪ: ಸಚಿವ ಹೆಚ್.ನಾಗೇಶ್ ವಿರುದ್ದ ಪ್ರಧಾನಿಗೆ ದೂರು ಕೊಟ್ಟ ಅಬಕಾರಿ ಅಧಿಕಾರಿಯ ಪುತ್ರಿ
ಸಚಿವ ಹೆಚ್.ನಾಗೇಶ್

Updated on: Dec 21, 2020 | 6:51 PM

ಕೋಲಾರ: ಅಬಕಾರಿ ಸಚಿವ ಹೆಚ್.ನಾಗೇಶ್ ₹ 1 ಕೋಟಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಅಬಕಾರಿ ಅಧಿಕಾರಿಯೊಬ್ಬರ ಪುತ್ರಿ ಪ್ರಧಾನಿ ಮೋದಿ ಕಚೇರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಹೊಸಪೇಟೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬಕಾರಿ ಅಧಿಕಾರಿಯೊಬ್ಬರು ಅನಾರೋಗ್ಯ ಹಿನ್ನೆಲೆಯಿಂದ ಬೆಂಗಳೂರಲ್ಲಿ ಖಾಲಿ ಇರುವ ಜಂಟಿ ಆಯುಕ್ತರ ಹುದ್ದೆಗೆ ನಿಯೋಜಿಸಲು ಸಚಿವರ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಅಬಕಾರಿ ಸಚಿವ ಹೆಚ್.ನಾಗೇಶ್ ವರ್ಗಾವಣೆ ಮಾಡಲು ಒಂದು ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಅಧಿಕಾರಿಯ ಪುತ್ರಿ ಪ್ರಧಾನಿ ಮೋದಿ ಕಚೇರಿಗೆ ದೂರು ನೀಡಿದ್ದಾರೆ.

ಅಲ್ಲದೆ ಅಬಕಾರಿ ಇಲಾಖೆಯಲ್ಲಿ ದಲ್ಲಾಳಿಗಳನ್ನು ಇರಿಸಿ ವರ್ಗಾವಣೆಯಲ್ಲಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಅಧಿಕಾರಿಯ ಪುತ್ರಿ ದೂರಿನಲ್ಲಿ ಆರೋಪ ಮಾಡಿದ್ದಾಳೆ. ಯುವತಿ ಕಳುಹಿಸಿರುವ ದೂರು ಪ್ರಧಾನಿ ಕಚೇರಿಯಲ್ಲಿ POWPU/E/2020/0655623 ಸಂಖ್ಯೆಯಲ್ಲಿ ದಾಖಲಾಗಿದೆ.

ರಾಜ್ಯ ಸರ್ಕಾರದ ಇ-ಜನ ಸ್ಪಂದನ ಮನವಿಯು 51868298 ಈ ಸಂಖ್ಯೆಯಲ್ಲಿ ದಾಖಲಾಗಿದೆ. ಅಧಿಕಾರಿಯ ಪುತ್ರಿಯ ಈ ಕಾರ್ಯದಿಂದಾಗಿ ಭ್ರಷ್ಟಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಯುವತಿಯು ರಾಜ್ಯದ ಇತರ ಸಚಿವರು ಹಾಗೂ ವಿರೋಧ ಪಕ್ಷದವರಿಗೂ ದೂರಿನ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಲಂಚ ಪಡೆದ BBMP ಹಿರಿಯ ಅರೋಗ್ಯಾಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ ಅರೆಸ್ಟ್

Published On - 6:44 pm, Mon, 21 December 20

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us