ಬೆಳಗಾವಿ: ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿಯ ಪ್ರವಾಹದಿಂದ ರೈತರ ಜಮೀನು ಜಲಾವೃತಗೊಂಡಿದೆ. ಇದರಿಂದ ನೂರಾರು ಎಕರೆ ಹೊಲ, ಗದ್ದೆಯಲ್ಲಿ ಬೆಳೆಸಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆ ನಾಶವಾಗಿದ್ದು ಇದರಿಂದ ಜಿಲ್ಲೆಯ ಉಚ್ಚಗಾಂವ್ ಗ್ರಾಮದ ರೈತರಿಗೆ ಸಂಕಷ್ಟ ಎದುರಾಗಿದೆ.
ಇದಲ್ಲದೆ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ವರ್ಷಧಾರೆಯ ಹಿನ್ನೆಲೆಯಲ್ಲಿ ಬೆಂಡಿಗೇರಿ ಗ್ರಾಮದ ಕೆರೆ ತುಂಬು ಕಟ್ಟೆ ಒಡೆದು ಹೋಗಿದೆ. ಇದರ ಪರಿಣಾಮವಾಗಿ ಕೆರೆಯ ನೀರು ಹೊಲಗಳಿಗೆ ನುಗ್ಗಿದ್ದು ಬೆಳೆ ಹಾನಿ ಸಂಭವಿಸಿದೆ.
ಇದಲ್ಲದೆ, ಅಪಾರ ಪ್ರಮಾಣದ ನೀರು ಸಹ ಪೋಲಾಗಿದೆ. ಕೆರೆ ಕಟ್ಟೆ ಒಡೆಯಲು ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರಿಂದ ಆರೋಪ ಕೇಳಿಬಂದಿದೆ.
Published On - 1:27 pm, Sat, 8 August 20