ಉದ್ವಿಗ್ನ ಗಡಿ: ಭಾರತ ಚೀನಾ ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆ ಆಯೋಜನೆ

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಇವತ್ತು ಭಾರತ ಮತ್ತು ಚೀನಾ ದೇಶಗಳ ಸೇನಾ ಅಧಿಕಾರಿಗಳ ಸಭೆ ನಡೆಯಲಿದೆ. ಉಭಯ ದೇಶಗಳ ನಡುವೆ ಗಡಿ ಸಂಘರ್ಷ ಆರಂಭವಾದನಂತರ ಈಗಾಗಲೆ ಹಲವು ಬಾರಿ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ. ಆದ್ರೆ ಸಮಸ್ಯೆ ಇತ್ಯರ್ಥವಾಗಿಲ್ಲ. ಹೀಗಾಗಿ ಇವತ್ತು ದೌಲತ್‌ ಬೇಗ್‌ ಓಲ್ಡಿ ಪ್ರದೇಶದಲ್ಲಿ ಎರಡು ದೇಶಗಳ ಸೇನಾಧಿಕಾರಿಗಳ ಸಭೆ ನಡೆಯುತ್ತಿದೆ. ಅತಿಕ್ರಮಿಸಿರುವ ಪ್ರದೇಶದಿಂದ ಚೀನಾ ಸೈನಿಕರನ್ನು ಹಿಂಪಡೆಯುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಹಾಗೇನೆ ಲಡಾಖ್ […]

ಉದ್ವಿಗ್ನ ಗಡಿ: ಭಾರತ ಚೀನಾ ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆ ಆಯೋಜನೆ
ಪ್ರಾತಿನಿಧಿಕ ಚಿತ್ರ
Follow us
Guru
| Updated By: ಸಾಧು ಶ್ರೀನಾಥ್​

Updated on: Aug 08, 2020 | 1:44 PM

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಇವತ್ತು ಭಾರತ ಮತ್ತು ಚೀನಾ ದೇಶಗಳ ಸೇನಾ ಅಧಿಕಾರಿಗಳ ಸಭೆ ನಡೆಯಲಿದೆ.

ಉಭಯ ದೇಶಗಳ ನಡುವೆ ಗಡಿ ಸಂಘರ್ಷ ಆರಂಭವಾದನಂತರ ಈಗಾಗಲೆ ಹಲವು ಬಾರಿ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ. ಆದ್ರೆ ಸಮಸ್ಯೆ ಇತ್ಯರ್ಥವಾಗಿಲ್ಲ. ಹೀಗಾಗಿ ಇವತ್ತು ದೌಲತ್‌ ಬೇಗ್‌ ಓಲ್ಡಿ ಪ್ರದೇಶದಲ್ಲಿ ಎರಡು ದೇಶಗಳ ಸೇನಾಧಿಕಾರಿಗಳ ಸಭೆ ನಡೆಯುತ್ತಿದೆ. ಅತಿಕ್ರಮಿಸಿರುವ ಪ್ರದೇಶದಿಂದ ಚೀನಾ ಸೈನಿಕರನ್ನು ಹಿಂಪಡೆಯುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಹಾಗೇನೆ ಲಡಾಖ್ ವಲಯದ ವಾಸ್ತವಿಕ ನಿಯಂತ್ರಣ ರೇಖೆಯಿಂದ ಸೈನಿಕರನ್ನು ಹಿಂಪಡೆಯುವ ವಿಚಾರ ಕೂಡಾ ಮೇಜರ್ ಜನರಲ್‌ಗಳ ಮಟ್ಟದ ಈ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.