
ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ಕಿಡ್ನಾಪ್ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಬಿಡಿಎ ಅಧಿಕಾರಿ ಡಾ. ಸುಧಾ ವಿರುದ್ದ ಈ ಹಿಂದೆ ಎಫ್ಐಆರ್ ದಾಖಲಾಗಿತ್ತು ಎಂಬ ಶಾಕಿಂಗ್ ಮಾಹಿತಿ ಈಗ ಹೊರಬಿದ್ದಿದೆ.
ಉದ್ಯಮಿಯ ಕಿಡ್ನಾಪ್ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಬಿಡಿಎ ಅಧಿಕಾರಿ ಡಾ. ಸುಧಾ ಅವರ ಪತಿ ಸ್ಟೋಯಿನಿ ಜೋಸೆಫ್ ಪ್ರಮುಖ ಆರೋಪಿಯಾಗಿದ್ದರು. ಆ ಪ್ರಕರಣದಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಅಜಿತ್ ಶೆಟ್ಟಿ, ದೀಪಕ್ ಶೆಟ್ಟಿ, ಗಜಾನನ, ಸಂದೀಪ್ ಶೆಟ್ಟಿ, ರಮೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಬಂಧಿತ ಆರೋಪಿಗಳು. ಆದರೆ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಡಾ.ಸುಧಾ ಅವರ ಪತಿ ಸ್ಟೋಯಿನಿ ಜೋಸೆಫ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಪೊಲೀಸ ತೀವ್ರವಾಗಿ ಶೋಧ ಕಾರ್ಯ ನಡೆಸಿದ್ದರು.
ಪ್ರಕರಣದ ವೃತ್ತಾಂತ ಏನು..?
ಸ್ಟೋಯಿನಿ ಜೋಸೆಫ್ ಅಂಡ್ ಟೀಂ ನಿಂದ ಉದ್ಯಮಿ ಪ್ರವೀಣ್ ಗಡಿಯಾರ್ ಕಿಡ್ನಾಪ್ ಮತ್ತು ಕೊಲೆ ಯತ್ನ ನಡೆದಿತ್ತು ಎಂದು ಪ್ರವೀಣ್ ಗಡಿಯಾರ್ ಜೆಪಿ ನಗರ ಪೊಲೀಸ್ ಠಾಣೆಗೆ ಈ ಹಿಂದೆ ದೂರು ನೀಡಿದ್ದರು.
ಜೋಸೆಫ್ ಸ್ನೇಹಿತ ಅಜಿತ್ ಶೆಟ್ಟಿ ಬಳಿ ಪ್ರವೀಣ್ ಗಡಿಯಾರ್ 30 ಲಕ್ಷ ಹಣವನ್ನ ಸಾಲವನ್ನಾಗಿ ಪಡೆದುಕೊಂಡಿದ್ದರಂತೆ. ಒಂದು ವರ್ಷದ ಬಳಿಕ 43 ಲಕ್ಷ ಹಣವನ್ನ ಪ್ರವೀಣ್ ಗಡಿಯಾರ್ ಹಿಂತಿರುಗಿಸಿದ್ದರು. ಆದರೆ ಅಜಿತ್ ಶೆಟ್ಟಿ ಹಾಗೂ ಸ್ಟೋಯಿನಿ ಜೋಸೆಫ್ ಇನ್ನೂ ಹಣ ನೀಡಬೇಕೆಂದು ಪ್ರವೀಣ್ ಗಡಿಯಾರ್ ಬಳಿ ದುಂಬಾಲು ಬಿದ್ದಿದ್ದರು.
2019 ರಲ್ಲಿ ಎಫ್ಐಆರ್ ದಾಖಲಾಗಿತ್ತು..
ಇದಕ್ಕೆ ಒಪ್ಪದಿದ್ದಾಗ ಕಳೆದ ಏಳು ವರ್ಷದಿಂದ ಬಿಡಿಎ ಲ್ಯಾಂಡ್ ಅಕ್ವಸೈಸೇಷನ್ ಅಧಿಕಾರಿಯಾಗಿದ್ದ ಡಾ. ಸುಧಾ ಅವರ ಅಧಿಕಾರ ಬಳಸಿಕೊಂಡು, ಸ್ಟೋಯಿನಿ ಜೋಸೆಫ್ ಪ್ರವೀಣ್ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ಗಂಗಮ್ಮನಗುಡಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.
ಪ್ರವೀಣ್ ಹೆಚ್ಚು ಹಣ ನೀಡಲು ಒಪ್ಪದೆ ಇದ್ದಾಗ ಆತನನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಹೀಗಾಗಿ ನನ್ನನ್ನು ಜೆಪಿ ನಗರದಲ್ಲಿರುವ ಸೂರ್ಯ ಕಂಫರ್ಟ್ ಲಾಡ್ಜ್ಗೆ ಬಲವಂತವಾಗಿ ಕರೆ ತಂದಿದ್ದರು ಎಂದು ಉದ್ಯಮಿ ಪ್ರವೀಣ್ ಗಡಿಯಾರ್ ಅವರು ಸ್ಟೋಯಿನಿ ಜೋಸೆಫ್ ಹಾಗೂ ಅಜಿತ್ ಶೆಟ್ಟಿ ಇಬ್ಬರ ವಿರುದ್ಧ ಜೆಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ 2019 ಆಗಸ್ಟ್ 20 ರಂದು ಜೆಪಿ ನಗರ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ದಾಖಲಾಗಿತ್ತು.
Published On - 2:51 pm, Sat, 7 November 20