ಚಿತ್ರದುರ್ಗ: ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೂಡಂಗಡಿ

|

Updated on: Mar 09, 2021 | 10:32 AM

ಚಿತ್ರದುರ್ಗ: ಗಾಂಧಿ ವೃತ್ತದ ಬಳಿ ಗೂಡಂಗಡಿಗಳಿಗೆ ಬೆಂಕಿ ಬಿದ್ದು ಹೂವು, ಹಣ್ಣು, ಪೂಜಾ ಸಾಮಗ್ರಿಗಳು ನಾಶವಾಗಿವೆ. 10ಕ್ಕೂ ಹೆಚ್ಚು ಗೂಡಂಗಡಿಗಳು ಸುಟ್ಟು ಭಸ್ಮವಾಗಿದ್ದು, ಇಂದು ಬೆಳಗಿನ ಜಾವ 4.30ರ ಹೊತ್ತಿಗೆ ಘಟನೆ ನಡೆದಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದು ಒಂದರಿಂದ ಮತ್ತೊಂದು ಅಂಗಡಿಗೆ ವ್ಯಾಪಿಸಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅಗ್ನಿ ನಂದಿಸುವ ಕಾರ್ಯ ನಡೆದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  ಆದಿವಾಲಾ ಗ್ರಾಮದ ಬಳಿ 3 ಗುಡಿಸಲು, ಬಣವೆಗಳು ಬೆಂಕಿಗಾಹುತಿ ಹಿರಿಯೂರು […]

ಚಿತ್ರದುರ್ಗ: ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೂಡಂಗಡಿ
ಅಗ್ನಿ ಅವಘಡ (ಪ್ರಾತಿನಿಧಿಕ ಚಿತ್ರ)
Follow us on

ಚಿತ್ರದುರ್ಗ: ಗಾಂಧಿ ವೃತ್ತದ ಬಳಿ ಗೂಡಂಗಡಿಗಳಿಗೆ ಬೆಂಕಿ ಬಿದ್ದು ಹೂವು, ಹಣ್ಣು, ಪೂಜಾ ಸಾಮಗ್ರಿಗಳು ನಾಶವಾಗಿವೆ. 10ಕ್ಕೂ ಹೆಚ್ಚು ಗೂಡಂಗಡಿಗಳು ಸುಟ್ಟು ಭಸ್ಮವಾಗಿದ್ದು, ಇಂದು ಬೆಳಗಿನ ಜಾವ 4.30ರ ಹೊತ್ತಿಗೆ ಘಟನೆ ನಡೆದಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದು ಒಂದರಿಂದ ಮತ್ತೊಂದು ಅಂಗಡಿಗೆ ವ್ಯಾಪಿಸಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅಗ್ನಿ ನಂದಿಸುವ ಕಾರ್ಯ ನಡೆದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಆದಿವಾಲಾ ಗ್ರಾಮದ ಬಳಿ 3 ಗುಡಿಸಲು, ಬಣವೆಗಳು ಬೆಂಕಿಗಾಹುತಿ
ಹಿರಿಯೂರು ತಾಲೂಕಿನ ಆದಿವಾಲಾ ಗ್ರಾಮದ ಬಳಿ 3 ಗುಡಿಸಲು, ಬಣವೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಯಲ್ಲಾ ಬೋವಿ, ತಿಮ್ಮಾ ಬೋವಿ, ಕರಿಯಪ್ಪ ಎಂಬುವರಿಗೆ ಸೇರಿದ ಗುಡಿಸಲು ಭಸ್ಮವಾಗಿದೆ.

ಜಮೀನಿನಲ್ಲಿದ್ದ ಗುಡಿಸಲು, ಜೋಳ, ನವಣೆ ಬಣವೆಗಳು ಸುಟ್ಟು ಭಸ್ಮವಾಗಿದೆ. ಹಳೇ ದ್ವೇಷ ಹಿನ್ನೆಲೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಶಂಕೆ ಮೂಡಿದ್ದು, ಗುಡಿಸಲು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಆದಿವಾಲಾ ಗ್ರಾಮದ ಬಳಿ 3 ಗುಡಿಸಲು, ಬಣವೆಗಳು ಬೆಂಕಿಗೆ ಆಹುತಿಯಾಗಿದೆ.

ಇದನ್ನೂ ಓದಿ: ದಾವಣಗೆರೆ ದರ್ಗಾದಲ್ಲಿ ಬೆಂಕಿ ಅವಘಡ: ಸಿಸಿ ಕ್ಯಾಮರಾದಿಂದ ಬಯಲಾಯಿತು ಅಸಲಿ ಕಾರಣ

ಇದನ್ನೂ ಓದಿ: Fire ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ: ಮನೆಯಲ್ಲಿದ್ದ 1 ಲಕ್ಷ ನಗದು, 30 ಗ್ರಾಂ ಚಿನ್ನ ಸುಟ್ಟು ಭಸ್ಮ