ಶಿವಮೊಗ್ಗ: ಆಕಸ್ಮಿಕವಾಗಿ ಕಾಲು ಜಾರಿ ತುಂಗಾ ನಾಲೆಗೆ ಬಿದ್ದಿದ್ದ ವ್ಯಕ್ತಿ ಅದೃಷ್ಟವಶಾತ್ ಬಚಾವ್ ಆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸಾಗರ ರಸ್ತೆಯ ಹರ್ಷ ಹೋಟೆಲ್ ಸಮೀಪ ಹಾದು ಹೋಗಿರುವ ತುಂಗಾ ನಾಲೆಗೆ ಬಿದ್ದಿದ್ದ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡಿ ಸಾವು ಗೆದ್ದು ಬಚಾವ್ ಆಗಿದ್ದಾನೆ. ನಾಲೆಗೆ ಬಿದ್ದಿದ್ದ 45 ವರ್ಷದ ಸಂತೋಷ್ನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸದ್ಯ ಈಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂತೋಷ್‌ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಂದು ಬೆಳ್ಳಂ ಬೆಳಗ್ಗೆ ಸಂತೋಷ್ ಜವರಾಯನ ದರ್ಶನ ಮಾಡಿದ್ದಾರೆ. ಇಂದು ಮುಂಜಾನೆಯ ಸಮಯ ಅಂದ್ರೆ ಇನ್ನು ಕೊಂಚ ಕತ್ತಲು ಆವರಿಸಿತ್ತು. ಈ ವೇಳೆ ಸಂತೋಷ್ ಬಹಿರ್ದೆಸೆಗೆಂದು ತೆರಳಿದ್ದ ಆಗ ಕತ್ತಲಿದ್ದ ಕಾರಣ ಏನನ್ನು ಗಮನಿಸದೆ ನಿದ್ದೆ ಕಣ್ಣಿನಲ್ಲೇ ಆಕಸ್ಮಿಕವಾಗಿ ಸುಮಾರು 80 ಅಡಿ ಆಳವಿರುವ ನಾಲೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ತಕ್ಷಣವೇ ನಾಲೆಗೆ ಬಿದ್ದಿದ್ದ ಸಂತೋಷ್ನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ನಾಲೆಯಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ.
ಇನ್ನು ನಾಲೆಗೆ ಬಿದ್ದಿದ್ದ ಸಂತೋಷ್‌ಗೆ ಗಾಯಗಳಾಗಿದ್ದು ಗಾಯಾಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 80 ಅಡಿ ಆಳದ ನಾಲೆಗೆ ಬಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸಿಬ್ಬಂದಿಯ ಸಹಾಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು.
ಇದನ್ನೂ ಓದಿ: Madhya pradesh Bus Accident: ನಾಲೆಗೆ ಬಿದ್ದ ಬಸ್; 32 ಮೃತದೇಹಗಳನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ
Published On - 12:14 pm, Tue, 16 March 21