ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ. ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ […]

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ

Updated on: Aug 21, 2020 | 10:35 AM

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ.

ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ ವಾಪಸ್ ಬಂದೆ.

ಆದರೆ ಈಗ ಮತ್ತೆ ನೀರು ಬಂದಿದೆ. ಬರಿ ಮನೆ ಬಿಟ್ಟು ಅಲೆದಾಡಿ ಜೀವನ ಮಾಡೋದಾಗಿದೆ. ಬೇರೆ ಕಡೆ ಜಾಗ ಕೊಡಿ, ಸಾಯೋದಕ್ಕಿಂತ ಅಲ್ಲಿ ಹೋಗಿ ಆದರೂ ಇರುತ್ತೇವೆ. ಎಷ್ಟೂ ಅಂತ ನೋಡೋದು ಸಾಕಾಗಿದೆ ಎಂದು ಕೈ ಮುಗಿದು ಅಜ್ಜಿ ಕಣ್ಣೀರು ಹಾಕಿದ್ದಾರೆ.