
ಮೈಸೂರು: ಸಿಡಿಮದ್ದಿನ ಆಹಾರ ಸೇವಿಸಿದಾಗ ಅದು ಸ್ಪೋಟಗೊಂಡು ಹಸು ಸಾವನ್ನಪ್ಪಿದೆ. ಈ ದಾರುಣ ಘಟನೆ ಚ್.ಡಿ.ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದಲ್ಲಿ ನಡೆದಿದೆ.
ರೈತ ನರಸಿಂಹೇಗೌಡರಿಗೆ ಸೇರಿದ ಹಸು, ಸಿಡಿಮದ್ದು ಇರಿಸಿದ್ದ ಅರಿವಿಲ್ಲದೇ ಆಹಾರ ಸೇವಿಸಿತ್ತು. ಕಾಡು ಪ್ರಾಣಿಗಳ ಬೇಟೆಗೆ ಕಿಡಿಗೇಡಿಗಳು ಇರಿಸಿದ್ದ ಆಹಾರ ಸೇವಿಸಿದಾಗ ಸ್ಪೋಟ ಉಂಟಾಗಿದೆ. ಸ್ಪೋಟದದಿಂದ ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಮೂಕ ಪ್ರಾಣಿಯ ರೋಧನಕ್ಕೆ ಸಿಡಿಮದ್ದು ಇರಿಸಿದ್ದವರಿಗೆ ಪ್ರಾಣಿ ಪ್ರಿಯರು ಹಿಡಿಶಾಪ ಹಾಕಿದ್ದು, ಸಿಡಿಮದ್ದು ಇಟ್ಟವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.