ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮರಿಮೊಮ್ಮಗನ ನಿಕಾಹ್​ನಾಮಾ ಒಬ್ಬ ಮಹಿಳಾ ಖಾಜಿ ನೆರವೇರಿಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 12, 2022 | 11:17 PM

ಇಂಥ ಅಪರೂಪದ ವಿಡಿಯೋವನ್ನು ನೋಡಿದ ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ‘ಕಾಲ ಬದಲಾಗುತ್ತಿದೆ’ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ‘ಎಂಥ ಸುಂದರ ದೃಶ್ಯ’ ಎಂದು ಉದ್ಗರಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮರಿಮೊಮ್ಮಗನ ನಿಕಾಹ್​ನಾಮಾ ಒಬ್ಬ ಮಹಿಳಾ ಖಾಜಿ ನೆರವೇರಿಸಿದರು!
ನಿಕಾಹ್​ನಾಮಾ ಶಾಸ್ತ್ರ ನೆರವೇರಿಸುತ್ತಿರುವ ಮಹಿಳಾ ಖಾಜಿ
Follow us on

ಮುಸ್ಲಿಂ ಸಮುದಾಯದಲ್ಲಿ (Muslim community) ಮಹಿಳಾ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಿ ಅನಿಸುತ್ತೆ. ಯಾಕೆಂದರೆ ಇಂಥ ಸಂದರ್ಭಗಳು ತೀರ ಅಪರೂಪ. ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೇನ್ (Zakir Hussain) ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು (Nikah) ಒಬ್ಬ ಮಹಿಳಾ ಖಾಜಿ ನೆರವೇರಿಸಿದರು. ಈ ಮದುವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ಅದು ವೈರಲ್ ಆಗಿದೆ. ಸಾವಿರಾರು ಜನ ಇದನ್ನು ವೀಕ್ಷಿಸುತ್ತಿದ್ದಾರೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.

ಯೋಜನಾ ಆಯೋಗದ ಮಾಜಿ ಸದಸ್ಯೆಯಾಗಿರುವ ಸೈದಾ ಸಯೇದೇನ್ ಹಮೀದ್ ಅವರು ಒಬ್ಬ ಖಾಜಿಯ ಜವಾಬ್ದಾರಿಯನ್ನು ಹೊತ್ತುಕೊಂಡು ರಹಮಾನ್ ಮತ್ತು ಉರ್ಸಿಲಾ ಅಲಿ ಅವರ ನಿಕಾಹ್ ವನ್ನು ನೆರವೇರಿಸಿದರು. ವರನ (ದುಲ್ಹಾ) ಅವರ ಮುತ್ತಜ್ಜಿ ಬೇಗಂ ಸಯೀದ ಖುರ್ಷೀದ್ ಅವರು ಸಂಸ್ಥಾಪಕ ಅಧ್ಯಕ್ಷೆಯಾಗಿರುವ ಮುಸ್ಲಿಂ ಮಹಿಳಾ ವೇದಿಕೆ ಆಶ್ರಯದ ಅಡಿಯಲ್ಲಿ (ಮುಸ್ಲಿಂ ವುಮೆನ್ಸ್ ಫೋರಮ್) ನಿಖಾನಾಮಕ್ಕಾಗಿ ನಿಗದಿಪಡಿಸಿದ ಷರತ್ತುಗಳನ್ನು ಸಿದ್ಧಪಡಿಸಲಾಯಿತು,’ ಎಂದು ಹೇಳಿಕೆಯೊಂದರಲ್ಲಿ ಹಮೀದ್ ಅವರು ತಿಳಿಸಿದ್ದಾರೆ.

ಇಂಥ ಅಪರೂಪದ ವಿಡಿಯೋವನ್ನು ನೋಡಿದ ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ‘ಕಾಲ ಬದಲಾಗುತ್ತಿದೆ’ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ‘ಎಂಥ ಸುಂದರ ದೃಶ್ಯ’ ಎಂದು ಉದ್ಗರಿಸಿದ್ದಾರೆ.

ಮುಸ್ಲಿಂ ಸಂಪ್ರದಾಯದ ಪ್ರಕಾರ ನಿಕಾಹ್ ನಾಮಕ್ಕೆ ಸಂಬಂಧಿಸಿದಂತೆ ಖುರಾನ್ ನಲ್ಲಿ ಸೂಚಿಲಾಗಿರುವ ಆದೇಶಗಳು ಮೆಹರ್, ಸಾಕ್ಷಿಗಳು ಮತ್ತು ಖಾಜಿ ಆಗಿದ್ದು ನಿಕಾಹ್ ನಾಮಾದ ಹೆಚ್ಚುವರಿ ಮಹತ್ವವು ಇಕ್ರಾರ್ನಾಮಾ (ಒಪ್ಪಂದ) ಆಗಿದೆ. ಇದರಲ್ಲಿ ವಧು-ವರರು ಪರಸ್ಪರ ಒಪ್ಪಿದ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳಿಗೆ ಸಂಬಂಧಿದ ಷರತ್ತುಗಳ ಜೊತೆಗೆ ವೈವಾಹಿಕ ಬದುಕಿನ ಎಲ್ಲಾ ಆಯಾಮಗಳ ಗೌರವ ಮತ್ತು ಆದರವನ್ನು ಒಳಗೊಂಡಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  Video: ಗೆದ್ದು 2ನೇ ಬಾರಿಗೆ ಸಿಎಂ ಆದ ಯೋಗಿ ಆದಿತ್ಯನಾಥ್​​ಗೆ ತಿಲಕವಿಟ್ಟು, ಶುಭಾಶಯ ಕೋರಿದ ಮುಲಾಯಂ ಸಿಂಗ್​ ಯಾದವ್​ ಸೊಸೆ, ಮೊಮ್ಮಗಳು