‘ಕೊರೊನಾಗೆ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳನ್ನು ಟೇಕ್‌ ಓವರ್‌ ಮಾಡಿ’

| Updated By:

Updated on: Jul 31, 2020 | 12:22 AM

ದೇವನಹಳ್ಳಿ: ರಾಜ್ಯದಲ್ಲಿ ಕೊರೊನಾವನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರಿಯಾದ ಪಯತ್ನಗಳನ್ನೇ ಮಾಡಲಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ನಾಯಕ ರಮೇಶ್‌ ಕುಮಾರ್‌ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಹೊಸಕೋಟೆ ತಾಲೂಕಿನ ತಾವರೆಕೆರೆಯಲ್ಲಿ ಮಾತನಾಡುತ್ತಿದ್ದ ರಮೇಶ್‌ಕುಮಾರ್‌, ನಿಮಗೆ ಅಧಿಕಾರವಿದೆ ಅಂತ ಇರೋ ಸರ್ಕಾರಿ ಆಸ್ವತ್ರೆಗಳನ್ನೆಲ್ಲ ಕೋವಿಡ್ ಆಸ್ವತ್ರೆಗಳಾಗಿ ಮಾಡಿದ್ದೀರಾ. ಕಣ್ಣು ಕಿಡ್ನಿ ಮತ್ತು ಹೃದಯಾಘಾತಕ್ಕೊಳಗಾದವರು ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ರಮೇಶ್‌ ಕುಮಾರ್‌, ಜನರಲ್ ಚಿಕಿತ್ಸೆಗೆ ಆಸ್ಪತ್ರೆಗಳಿಲ್ಲದೆ […]

‘ಕೊರೊನಾಗೆ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳನ್ನು ಟೇಕ್‌ ಓವರ್‌ ಮಾಡಿ’
Follow us on

ದೇವನಹಳ್ಳಿ: ರಾಜ್ಯದಲ್ಲಿ ಕೊರೊನಾವನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರಿಯಾದ ಪಯತ್ನಗಳನ್ನೇ ಮಾಡಲಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ನಾಯಕ ರಮೇಶ್‌ ಕುಮಾರ್‌ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆ ತಾಲೂಕಿನ ತಾವರೆಕೆರೆಯಲ್ಲಿ ಮಾತನಾಡುತ್ತಿದ್ದ ರಮೇಶ್‌ಕುಮಾರ್‌, ನಿಮಗೆ ಅಧಿಕಾರವಿದೆ ಅಂತ ಇರೋ ಸರ್ಕಾರಿ ಆಸ್ವತ್ರೆಗಳನ್ನೆಲ್ಲ ಕೋವಿಡ್ ಆಸ್ವತ್ರೆಗಳಾಗಿ ಮಾಡಿದ್ದೀರಾ. ಕಣ್ಣು ಕಿಡ್ನಿ ಮತ್ತು ಹೃದಯಾಘಾತಕ್ಕೊಳಗಾದವರು ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ರಮೇಶ್‌ ಕುಮಾರ್‌, ಜನರಲ್ ಚಿಕಿತ್ಸೆಗೆ ಆಸ್ಪತ್ರೆಗಳಿಲ್ಲದೆ ಎಲ್ಲವನ್ನೂ ಕೋವಿಡ್ ಆಸ್ಪತ್ರೆ ಮಾಡಿ ತಪ್ಪು ಮಾಡಿದ್ದಿರಿ ಎಂದು ಬಿಎಸ್‌ ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದರು.

ಖಾಸಗಿ ಆಸ್ವತ್ರೆಗಳ ವಿಚಾರದಲ್ಲಿ ದೃಡ ಸಂಕಲ್ಪ ಮಾಡಿ ಅವುಗಳನ್ನ ಸರ್ಕಾರದ ವಶಕ್ಕೆ ಪಡೆಯಲಿ. ರಾಷ್ಟ್ರೀಯ ವಿಪತ್ತು ಅಂತ‌ ಘೋಷಣೆ ಮಾಡಿ ಖಾಸಗಿ ಆಸ್ವತ್ರೆಗಳನ್ನ ಟೇಕ್ ಒವರ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಖಾಸಗಿ ಆಸ್ಪತ್ರೆಗಳಿಗೆ ಹೋದ ರೋಗಿಗಳನ್ನ ಅವರು ಸೇರಿಸಿಕೊಳ್ಳುತ್ತಿಲ್ಲ, ಸೇರಿಸಿಕೊಂಡರೂ ಅವರಿಗೆ ಇಷ್ಟ ಬಂದಹಾಗೆ ಬಿಲ್‌ ಮಾಡುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿ ಹಣ ಮಾಡುವುದು ಅತ್ಯಂತ ನೀಚ ಕೆಲಸ. ಈ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

Published On - 6:13 pm, Wed, 29 July 20