Gold Silver Price: ಚಿನ್ನ ದರ ಕುಸಿತ.. ಕೊರೊನಾ ಹೆಚ್ಚಾಗುತ್ತಿದ್ದು ಚಿನ್ನ ದರ ಏರಿಕೆ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ

|

Updated on: Mar 22, 2021 | 8:34 AM

Gold Silver Rate in Bengaluru: ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ದರ ಇದೀಗ ಕುಸಿದಿದೆ. ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವುದರಿಂದ ಚಿನ್ನ ದರ ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

Gold Silver Price: ಚಿನ್ನ ದರ ಕುಸಿತ.. ಕೊರೊನಾ ಹೆಚ್ಚಾಗುತ್ತಿದ್ದು ಚಿನ್ನ ದರ ಏರಿಕೆ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ
ಚಿನ್ನದ ಉಂಗುರ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ದರ ಕುಸಿದಿದೆ. ಕಳೆದ ವರ್ಷ ದಾಖಲೆಯ ಗರಿಷ್ಠ ಮಟ್ಟವನ್ನು ಗಮನಿಸಿದಾಗ ಸುಮಾರು ಶೇ.21ರಷ್ಟು ದರ ಇಳಿಕೆ ಕಂಡು ಬಂದಿದೆ. ದೈನಂದಿನ ದರ ವ್ಯತ್ಯಾಸವನ್ನು ಗಮನಿಸಿದರೆ ಒಂದು ವಾರದಿಂದ ಚಿನ್ನ ದರ ಏರಿಕೆಯತ್ತ ಸಾಗುತ್ತಿದೆ. ಇಂದು ಸೋಮವಾರ ಚಿನ್ನ ದರ ಕೊಂಚ ಇಳಿಕೆ ಕಂಡು ಬಂದಿದೆ. 22 ಕ್ಯಾರೆಟ್ 10ಗ್ರಾಂ ಚಿನ್ನ 42,240 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10ಗ್ರಾಂ ಚಿನ್ನ ದರ 46,080 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿಯಷ್ಟು ಇಳಿಕೆ ಕಂಡಿದೆ ಎಂದು ಹೇಳಬಹುದು.

ಚಿನ್ನ ಅಂದಾಕ್ಷಣ ದರದಲ್ಲಿ ಏರಿಳಿತ ಕಂಡು ಬರುವುದು ಮಾಮೂಲಿ ಸಂಗತಿ. ನಿನ್ನೆ ಕಂಡು ಬಂದ ದರ ಇಂದು ಇರುವುದಿಲ್ಲ. ದರ ವ್ಯತ್ಯಾಸವಾಗುತ್ತಲೇ ಇರುತ್ತದೆ. ಹೀಗಿದ್ದಾಗ ಇಂದು ಸೋಮವಾರ ಚಿನ್ನ ದರ ಹೇಗಿರಬಹುದು? ನಿನ್ನೆ ಭಾನುವಾರ ಚಿನ್ನವನ್ನು ಯಾವ ದರದಲ್ಲಿ ಗ್ರಾಹಕರು ಖರೀದಿಸಿದ್ದಾರೆ ಎಂಬೆಲ್ಲಾ ವಿಚಾರದ ಬಗ್ಗೆ ತಿಳಿಯೋಣ. ಗರಿಷ್ಠ ದಾಖಲೆಯ ಮಟ್ಟ ತಲುಪಿದ್ದ ಚಿನ್ನ ಶೇ.21ರಷ್ಟು ಇಳಿಕೆ ಕಂಡಿದೆ. ಹಾಗಿದ್ದಾಗ ಚಿನ್ನ ಕೊಳ್ಳುವುದರ ಕುರಿತಾಗಿ ಯೋಚಿಸಬಹುದು. ಆದರೆ, ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಲಗ್ಗೆ ಇಟ್ಟಿದೆ. ಹಾಗಾಗಿ ಅಂಗಡಿಗಳಿಗೆ, ಮಾಲ್​ಗಳಿಗೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬರುತ್ತಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ದರ ಇದೀಗ ಕುಸಿದಿದೆ. ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವುದರಿಂದ ಚಿನ್ನ ದರ ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

22 ಕ್ಯಾರೆಟ್ ಚಿನ್ನ ದರ ಮಾಹಿತಿ
1 ಗ್ರಾಂ ಚಿನ್ನ ನಿನ್ನೆ 4,225 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,224 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,800 ರೂಪಾಯಿ ಇದ್ದು, ಇಂದಿನ ದರ 33,792 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,250 ರೂಪಾಯಿ ಇದ್ದು, ಇಂದು ದರ 42,240 ರೂಪಾಯಿ ಆಗಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,22,500 ರೂಪಾಯಿ ಇದ್ದು, ಇಂದು ದರ 4,22,400 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ ಮಾಹಿತಿ
1ಗ್ರಾಂ ಚಿನ್ನ ನಿನ್ನೆ 4,609 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,608 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,872 ರೂಪಾಯಿ ಇದ್ದು, ಇಂದು ದರ 36,864 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 46,090 ರೂಪಾಯಿ ಆಗಿದ್ದು ಇಂದು ದರ 46,080 ರೂಪಾಯಿ ಆಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,60,900 ರೂಪಾಯಿ ಆಗಿದ್ದು, ಇಂದು ದರ 4,60,800 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ಗ್ರಾಂ ಚಿನ್ನದಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದೆ.

ಬೆಳ್ಳಿ ದರ
ಅಂತರಾಷ್ಟ್ರೀಯ ಟ್ರೆಂಡ್​, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆ ದಿನದ ಚಿನ್ನ ಮತ್ತು ಬೆಳ್ಳಿ ದರವನ್ನು ನಿರ್ಧರಿಸಲಾಗುತ್ತದೆ. ಇನ್ನು, ಬೆಳ್ಳಿ ದರವನ್ನು ದೈನಂದಿನ ದರ ಬದಲಾವಣೆಯಲ್ಲಿ ಪರಿಶೀಲಿಸಿದಾಗ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನೆಯ ದರವನ್ನೇ ಇಂದೂ ಬೆಳ್ಳಿ ಕಾಪಾಡಿಕೊಂಡಿದೆ. 1ಗ್ರಾಂ ಬೆಳ್ಳಿ ನಿನ್ನೆ 67.50 ರೂಪಾಯಿಗೆ ಮಾರಾಟವಾಗಿದ್ದು, ಇಂದು ಸೋಮವಾರ ಕೂಡಾ ದರ ವ್ಯತ್ಯಾಸ ಕಂಡು ಬಂದಿಲ್ಲ. 8ಗ್ರಾಂ ಬೆಳ್ಳೀ ದರ 540 ರೂಪಾಯಿ ಇದೆ. 10 ಗ್ರಾಂ ಬೆಳ್ಳಿ ದರ 675 ರೂಪಾಯಿ ಇದೆ. 100ಗ್ರಾಂ ಬೆಳ್ಳಿ ನಿನ್ನೆ 6,750 ರೂಪಾಯಿಗೆ ಮಾರಾಟವಾಗಿತ್ತು, ಇಂದು ಸೋಮವಾರ ಕೂಡಾ ಅದೇ ದರದಲ್ಲಿದೆ. 1ಕೆಜಿ ಬೆಳ್ಳಿ ದರ 67,500 ರೂಪಾಯಿ ಇದೆ.

ಇದನ್ನೂ ಓದಿ: Gold Silver Price: ಒಂದು ವಾರದಿಂದ ಚಿನ್ನ ದರ ಏರಿಕೆ.. ಕಡಿಮೆಯಾದ ಬೇಡಿಕೆ!

Gold Silver Price: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ! 1ಕೆಜಿ ಬೆಳ್ಳಿ ದರ 66,900 ರೂಪಾಯಿ

Published On - 8:34 am, Mon, 22 March 21