Gold Silver Price: ಒಂದು ವಾರದಿಂದ ಚಿನ್ನ ದರ ಏರಿಕೆ.. ಕಡಿಮೆಯಾದ ಬೇಡಿಕೆ!

Gold Silver Rate in Bengaluru: ಒಂದು ವಾರದಿಂದ ದರ ಏರಿಕೆಯತ್ತ ಸಾಗುತ್ತಿರುವುದರಿಂದ ಆಭರಣ ಬೇಡಿಕೆ ಕುಸಿಯುತ್ತಿದೆ. ಇಂದು ದರ ಹೇಗಿದೆ? ಎಂಬುದರ ವಿವರ ಇಲ್ಲಿದೆ.

Gold Silver Price: ಒಂದು ವಾರದಿಂದ ಚಿನ್ನ ದರ ಏರಿಕೆ.. ಕಡಿಮೆಯಾದ ಬೇಡಿಕೆ!
ಚಿನ್ನದ ಉಂಗುರ
Follow us
shruti hegde
|

Updated on:Mar 21, 2021 | 9:09 AM

ಬೆಂಗಳೂರು: ಚಿನ್ನ ದರ ಸಾಮಾನ್ಯವಾಗಿ ಹಾವು-ಏಣಿ ಆಟವಾಡುತ್ತಿರುವುದು ಸರ್ವೇ ಸಾಮಾನ್ಯ. ಹಾಗಿದ್ದಾಗ ಚಿನ್ನ ದರ ಆಗಾಗ ಸೆಣೆಸಾಡುತ್ತಿದ್ದರೂ ಅಮೂಲ್ಯವಾದ ಹಳದಿ ಲೋಹ ಸ್ವಲ್ಪ ಲಾಭಗಳಿಸಿಕೊಂಡಿದೆ. ಕಳೆದ ಶುಕ್ರವಾರ 10ಗ್ರಾಂ ಚಿನ್ನ ದರ 45,008 ರೂಪಾಯಿ ಇದ್ದು, 250 ರೂಗಳಷ್ಟು ಏರಿಕೆ ಕಂಡಿತ್ತು. ಒಂದು ವಾರದಿಂದ ದರ ಏರಿಕೆ ಕಂಡಿರುವ ಚಿನ್ನ ಬೇಡಿಕೆಯನ್ನು ಕಡಿಮೆ ಮಾಡಿಕೊಂಡಿದೆ ಎಂದು ರಾಯಿಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರೆಟ್ 10 ಗ್ರಾಂ ಚಿನ್ನ ದರ 42,250 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 46,090 ರೂಪಾಯಿಗೆ ಜಿಗಿದಿದೆ. ದೈನಂದಿನ ದರ ಬದಲಾವಣೆ ಗಮನಿಸಿದಾಗ 160 ರೂಪಾಯಿ ಏರಿಕೆ ಕಂಡಿದೆ. ಇನ್ನು, ಬೆಳ್ಳಿ ದರವನ್ನು ಪರಿಶೀಲಿಸಿದಾಗ ನಿನ್ನೆ 1ಕೆಜಿ ಬೆಳ್ಳಿ 67,300 ರೂಪಾಯಿಗೆ ಮಾರಾಟವಾಗಿದ್ದು, ಇಂದು 200 ರೂಪಾಯಿಯಷ್ಟು ಏರಿಕೆ ಕಂಡಿದೆ. ದರ 67,500 ರೂಪಾಯಿ ಆಗಿದೆ.

22 ಕ್ಯಾರೆಟ್ ಚಿನ್ನ ದರ 1 ಗ್ರಾಂ ಚಿನ್ನ ನಿನ್ನೆ 4,210 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ ಏರಿಕೆ ಕಂಡಿದ್ದು, 4,225 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,680 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 33,800 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,100 ರೂಪಾಯಿ ಆಗಿದ್ದು, ಇಂದು ದರ 42,250 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,21,000 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,22,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಏಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ 1ಗ್ರಾಂ ಚಿನ್ನ ನಿನ್ನೆ 4,593 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,609 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,744 ರೂಪಾಯಿ ಆಗಿದ್ದು, ಇಂದಿನ ದರ 36,872 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,930 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 46,090 ರೂಪಾಯಿ ಆಗಿದೆ. ದರ ಏರಿಕೆಯಲ್ಲಿ 160 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನವನ್ನು ನಿನ್ನೆ 4,59,300 ರೂಪಾಯಿಗೆ ಗ್ರಾಹಕರು ಕೊಂಡಿದ್ದು, ಇಂದು ದರ 4,60,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,600 ರೂಪಾಯಿ ಹೆಚ್ಚಳವಾಗಿದೆ.

ದರ ಏರಿಕೆಯಿಂದ ಆಭರಣ ಬೇಡಿಕೆ ಕುಸಿಯುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆ, ಅಮೆರಿಕದಲ್ಲಿನ ಆರ್ಥಿಕ ವ್ಯವಸ್ಥೆ ಬದಲಾವಣೆ ಭಾರತದ ಚಿನ್ನ ದರ ನಿರ್ಧರಿಸುತ್ತದೆ. ಜನರು ಶುದ್ಧ ಚಿನ್ನವನ್ನು ಖರೀದಿ ಮಾಡಲು ಮುಗಿಬೀಳುತ್ತಿದ್ದಾರೆ.

ಕಳೆದ ವಾರದಲ್ಲಿ ಅಮೆರಿಕ ಡಾಲರ್​ ಇಳುವರಿ ಏರಿಕೆಯಿಂದಾಗಿ ಚಿನ್ನ ದರ ಏರಿಕೆ ಕಾಣುತ್ತಿದೆ. ಭಾರದದಲ್ಲಿ ಕಳೆದ ಗರಿಷ್ಠ ಮಟ್ಟದಲ್ಲಿ 10ಗ್ರಾಂ ಚಿನ್ನ ದರ 56,200 ರೂಪಾಯಿ ತಲುಪಿತ್ತು. ಈ ವರ್ಷ ಆಗಸ್ಟ್​ನಲ್ಲಿ ದರ ಪರಿಶೀಲಿಸಿದಾಗ 11,000ದಷ್ಟು ಇಳಿಕೆ ಕಂಡಿದೆ. ಚಿನ್ನ ದರ ಒಂದು ವರ್ಷದಲ್ಲಿ 10ಗ್ರಾಂಗೆ 44,150 ರೂಪಾಯಿಗೆ ಇಳಿದಿದೆ. ಭಾರತದಲ್ಲಿ ಚಿನ್ನ ದರದಲ್ಲಿ ಶೇ.10.75 ಆಮದು ಸುಂಕ ಹಾಗೂ ಶೇ.3ರಷ್ಟು ಜಿಎಸ್​ಟಿ ವಿಧಿಸಲಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ವೈರಸ್​ ಕಂಡು ಬರುವಿಕೆ ಹೆಚ್ಚಳದಿಂದಾಗಿ ರೋಗ ಹರಡುವಿಕೆಯ ಪ್ರಮಾಣ ಏರುತ್ತಿದೆ. ಚಿನ್ನದ ಅಂಗಡಿಗಳಿಗೆ, ಮಾಲ್​ಗಳಿಗೆ ಅಧಿಕಾರಿಗಳು ನಿರ್ಬಂಧ ಹೇರಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೂ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಚಿನ್ನ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ರಾಯಿಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆಳ್ಳಿ ದರ ಮಾಹಿತಿ ದೈನಂದಿನ ದರ ಬದಲಾವಣೆ ಗಮನಿಸಿದಾಗ ಬೆಳ್ಳಿ ದರವೂ ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು 67.50 ರೂಪಾಯಿ ಆಗಿದೆ. 8ಗ್ರಾಂ ಬೆಳ್ಳಿ ದರ 540 ರೂಪಾಯಿಗೆ ಏರಿದೆ. ಇನ್ನು, 10 ಗ್ರಾಂ ಬೆಳ್ಳಿ ದರ ದೈನಂದಿನ ದರ ಬದಲಾವಣೆಯ ಏರಿಕೆಯ ನಂತರ 675 ರೂಪಾಯಿಗೆ ಜಿಗಿದಿದೆ. 100 ಗ್ರಾಂ ಬೆಳ್ಳಿ ದರ 6,750 ರೂಪಾಯಿ ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ 200 ರೂಪಾಯಿಯಷ್ಟು ಏರಿಕೆ ಕಂಡಿದ್ದು ದರ 67,500 ರೂಪಾಯಿ ಆಗಿದೆ.

ಇದನ್ನೂ ಓದಿ: Gold Silver Price: ಚಿನ್ನ ದರದಲ್ಲಿ ಏರಿಕೆಯೂ ಇಲ್ಲ.. ಇಳಿಕೆಯೂ ಇಲ್ಲ!

ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಲು ಇಂದೇ ಶುಭ ಶುಕ್ರವಾರ.. ನೋಡಿ ಹೀಗಿದೆ ದರ !

Published On - 9:08 am, Sun, 21 March 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್