Petrol Diesel Price: ಇಂದಿನ ಪೆಟ್ರೋಲ್​, ಡೀಸೆಲ್ ದರ ಹೀಗಿದೆ!

Petrol Diesel Rate in Bangalore: ಮಾರ್ಚ್​ ತಿಂಗಳ ಪ್ರಾರಂಭದಿಂದಲೂ ಪೆಟ್ರೋಲ್​, ಡೀಸೆಲ್ ದರ ಸ್ಥಿರವಾಗಿಯೇ ಉಳಿದಿದೆ.

Petrol Diesel Price: ಇಂದಿನ ಪೆಟ್ರೋಲ್​, ಡೀಸೆಲ್ ದರ ಹೀಗಿದೆ!
ಸಾಂದರ್ಭಿಕ ಚಿತ್ರ
Follow us
shruti hegde
| Updated By: Digi Tech Desk

Updated on:Mar 25, 2021 | 11:30 AM

ಬೆಂಗಳೂರು: ಸರ್ಕಾರಿ ತೈಲ ಕಂಪನಿಗಳು 22ನೇ ದಿನವೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಬದಲಾವಣೆ ಮಾಡಿಲ್ಲ. ದೇಶದ ರಾಜಧಾನಿ ಸೇರಿ ಇಂಧನ ದರ ಮಾರ್ಚ್​ ತಿಂಗಳ ಪ್ರಾರಂಭದಿಂದ ಸ್ಥಿರವಾಗಿ ಉಳಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆ ಕಂಡಿದೆ.

ಕಳೆದ ಶುಕ್ರವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಿದ್ದು, ಬ್ರೆಂಟ್ ಶುಕ್ರವಾರ ಬ್ಯಾರೆಲ್​ಗೆ $64ಕ್ಕಿಂತ ಹೆಚ್ಚಾಗಿದೆ. ಇಂದು ಪ್ರತಿ ಲೀಟರ್​ ಪೆಟ್ರೋಲ್​ ದರ ದೆಹಲಿಯಲ್ಲಿ 91.17 ರೂಪಾಯಿ ಹಾಗೂ ಡೀಸೆಲ್​ಅನ್ನು ಪ್ರತಿ ಲೀಟರಿಗೆ 81.47 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಮುಗಿದ ನಂತರ ಇಂಧನ ದರದಲ್ಲಿ ವ್ಯತ್ಯಾಸವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಮಾರ್ಚ್​ ತಿಂಗಳ ಪ್ರಾರಂಭದಿಂದ ಪೆಟ್ರೋಲ್​, ಡೀಸೆಲ್​ ದರ ಬದಲಾಗದೇ ಸ್ಥಿರವಾಗಿಯೇ ಉಳಿದಿದೆ. ಇಂದಿಗೆ ಪೆಟ್ರೋಲ್​ ದರ ಶತಕ ಬಾರಿಸಬೇಕಿತ್ತು. ಆದರೆ ನಿಶ್ವಲವಾಗಿ ನಿಂತಿದೆ. ಇದಕ್ಕೆ ರಾಜಕೀಯ ನಂಟು ಏನಾದರೂ ಇದೆಯಾ ಎಂಬ ಸಂದೇಹದ ಮಾತುಗಳೂ ಕೇಳಿಬರುತ್ತಿದೆ.

ಮೆಟ್ರೋ ನಗರಗಳಲ್ಲಿ ಪೆಟ್ರೋಲ್​ ಡೀಸೆಲ್​ ದರ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.17 ರೂಪಾಯಿ ಹಾಗೂ ಡೀಸೆಲ್​ 81.47 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 97.57 ರೂಪಾಯಿ ಹಾಗೂ ಡೀಸೆಲ್ 88.60 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್ 97.57 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 84.35 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 93.11 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 86.45 ರೂಪಾಯಿಗೆ ಮಾರಾಟವಾಗುತ್ತಿದೆ. ನೋಯ್ಡಾದಲ್ಲಿ ಪ್ತಿ ಲೀಟರ್​ ಪೆಟ್ರೋಲ್​ 89.38 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 81.91 ರೂಪಾಯಿ ಇದೆ.

ಇನ್ನು, ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 94.22 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್ 86.37 ರೂಪಾಯಿ ಹಾಗೂ ಪಾಟ್ನಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 93.48 ರೂಪಾಯಿ ಹಾಗೂ ಡೀಸೆಲ್ 81.17 ರೂಪಾಯಿ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.31 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 81.85 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ

ಇದನ್ನೂ ಓದಿ: ಇಂದಿಗೆ ಪೆಟ್ರೋಲ್​ ಬೆಲೆ ಶತಕ ಬಾರಿಸಬೇಕಿತ್ತು! ಆದ್ರೆ ನಿಶ್ಚಲವಾಗಿ ನಿಂತುಬಿಟ್ಟಿದೆ. ಏನಿದರ ರಾಜಕೀಯ? ಇಲ್ಲಿದೆ ವಿವರ

Published On - 9:44 am, Sun, 21 March 21

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ