ಚಿನ್ನದ ವ್ಯಾಪಾರಿಯ ಮಗನ ಬರ್ಬರ ಕೊಲೆ: ಕೆಲಸಗಾರನ ಅಪಹರಣ

|

Updated on: Jan 14, 2021 | 12:04 PM

ಚಿನ್ನದ ವ್ಯಾಪಾರಿ ಮಗನಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮಿನಲ್ಲಿ ಇದ್ದಾಗ ಘಟನೆ ನಡೆದಿದೆ. ಚಿನ್ನದ ಆಸೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚಿನ್ನದ ವ್ಯಾಪಾರಿಯ ಮಗನ ಬರ್ಬರ ಕೊಲೆ: ಕೆಲಸಗಾರನ ಅಪಹರಣ
ಕೊಲೆಯಾದ ನರೇಂದ್ರ , ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ
Follow us on

ಯಾದಗಿರಿ: ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಚಿನ್ನದ ವ್ಯಾಪಾರಿಯ ಮಗನನ್ನು ಬರ್ಬರವಾಗಿ ಹತ್ಯೆ  ಮಾಡಿ,  ಕೆಲಸಗಾರನನ್ನು ಅಪಹರಿಸಿದ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.

ಚಿನ್ನದ ವ್ಯಾಪಾರಿ ಮಗನಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮಿನಲ್ಲಿ ಇದ್ದಾಗ ಘಟನೆ ನಡೆದಿದೆ. ಚಿನ್ನದ ಆಸೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಈ ಪ್ರಕರಣ ಹುಣಸಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸಾಲ ಮಾಡಿ ಮನೆ ಬಿಟ್ಟ ಮಗ.. ಸಾಲಗಾರರ ಕಾಟ ತಾಳದೆ ವಿಷ ಸೇವಿಸಿ ತಂದೆ ಆತ್ಮಹತ್ಯೆ, ಅಂತ್ಯಸಂಸ್ಕಾರಕ್ಕೆ ಬರುವಂತೆ ತಾಯಿ ಮನವಿ

 

 

Published On - 12:00 pm, Thu, 14 January 21