ಕೊರೊನಾ ಗೆದ್ದ ರಾಜ್ಯದ ಮೊದಲ ಶತಾಯುಷಿ ವೃದ್ದೆ, ಎಲ್ಲಿ?

ಬಳ್ಳಾರಿ: ದೇಶದಲ್ಲಿ ಕೊರೊನಾ ರುದ್ರತಾಂಡವವಾಡುತ್ತಿದ್ದು ದಿನೇ ದಿನೇ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಹುಟ್ಟಿದ ಮಗುವಿನಿಂದ ಹಿಡಿದು ವಯಸ್ಕರವರೆಗೂ ಎಲ್ಲರನ್ನೂ ಕೊರೊನಾ ಸೋಂಕಿನ ಭಾದೆ ಕಾಡುತ್ತಿದೆ. ಕೆಲವರು ಸೋಂಕಿನಿಂದ ಗುಣಮುಖರಾಗದೆ ಸಾವನಪ್ಪುತ್ತಿದ್ದರೆ ಇನ್ನೂ ಹಲವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಹೋಗುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂಬಂತೆ ಶತಾಯುಷಿ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಶತಾಯುಷಿ ವೃದ್ಧೆಯೊಬ್ಬರು ಜುಲೈ 16ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಹೂವಿನಹಡಗಲಿ […]

ಕೊರೊನಾ ಗೆದ್ದ ರಾಜ್ಯದ ಮೊದಲ ಶತಾಯುಷಿ ವೃದ್ದೆ, ಎಲ್ಲಿ?
Updated By:

Updated on: Jul 25, 2020 | 8:23 PM

ಬಳ್ಳಾರಿ: ದೇಶದಲ್ಲಿ ಕೊರೊನಾ ರುದ್ರತಾಂಡವವಾಡುತ್ತಿದ್ದು ದಿನೇ ದಿನೇ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಹುಟ್ಟಿದ ಮಗುವಿನಿಂದ ಹಿಡಿದು ವಯಸ್ಕರವರೆಗೂ ಎಲ್ಲರನ್ನೂ ಕೊರೊನಾ ಸೋಂಕಿನ ಭಾದೆ ಕಾಡುತ್ತಿದೆ. ಕೆಲವರು ಸೋಂಕಿನಿಂದ ಗುಣಮುಖರಾಗದೆ ಸಾವನಪ್ಪುತ್ತಿದ್ದರೆ ಇನ್ನೂ ಹಲವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಹೋಗುತ್ತಿದ್ದಾರೆ.

ಅಚ್ಚರಿಯ ಸಂಗತಿ ಎಂಬಂತೆ ಶತಾಯುಷಿ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಶತಾಯುಷಿ ವೃದ್ಧೆಯೊಬ್ಬರು ಜುಲೈ 16ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದರು.

ಹೀಗಾಗಿ ಹೂವಿನಹಡಗಲಿ ಆಸ್ಪತ್ರೆಯ ವೈದ್ಯರು ವೃದ್ಧೆಯ ಮನೆಗೆ ತೆರಳಿ ಚಿಕಿತ್ಸೆ ನೀಡಲಾಗಿ ಈಗ ವೃದ್ಧೆ ಕೊರೊನಾ ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ಕೊರೊನಾವನ್ನು ಗೆದ್ದ ಮೊದಲ ಶತಾಯುಷಿ ಎಂಬ ಕೀರ್ತಿ ವೃದ್ಧೆಯದಾಗಿದೆ.

Published On - 3:14 pm, Fri, 24 July 20