ಬಳ್ಳಾರಿ: ಹಿರಿಯ ಅಧಿಕಾರಿಯ ಆಕ್ರೋಶಕ್ಕೆ ಬೇಸತ್ತು ಪೊಲೀಸ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಂಪಿ Dy. SP ಎಸ್.ಎಸ್. ಕಾಶಿಗೌಡ ಅಧಿಕಾರಿಗಳ ಆಕ್ರೋಶಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಏನಿದು ರಾಜೀನಾಮೆ ಪ್ರಕರಣ?
ಹಂಪಿ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಇತ್ತೀಚೆಗೆ IGP ನಂಜುಂಡಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಈ ವೇಳೆ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದಿದ್ದಕ್ಕೆ ಕಾಶಿಗೌಡಗೆ ನಂಜುಂಡಸ್ವಾಮಿ ತರಾಟೆ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಕೆಲಸ ಮಾಡದಿದ್ರೆ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಿ ಇಲ್ಲವೇ ರಾಜೀನಾಮೆ ನೀಡಿ ಅಂತಾ IGP ನಂಜುಂಡಸ್ವಾಮಿ ತಮ್ಮ ಆಕ್ರೋಶ ಹೊರಹಾಕಿದ್ದರಂತೆ. ಅಧಿಕಾರಿಯ ಆಕ್ರೋಶಕ್ಕೆ ಬೇಸತ್ತು ಕಾಶಿಗೌಡ ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡ್ತಿದ್ದೀರಿ: DCP ಕೃಷ್ಣಕಾಂತ್ ಮಾರುತ್ತರ
Published On - 11:06 am, Sat, 24 October 20