‘ಇನ್ನೂ ತಯಾರಿಯೇ ಆಗದ ವ್ಯಾಕ್ಸಿನ್‌ನಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ!’

ಚಿತ್ರದುರ್ಗ: ಇನ್ನೂ ತಯಾರಿಯೇ ಆಗದ ಕೊರೊನಾ ವ್ಯಾಕ್ಸಿನ್‌ನಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ವ್ಯಾಕ್ಸಿನ್‌ ಅನ್ನು ಬಿಹಾರಕ್ಕೆ ಮಾತ್ರ ಉಚಿತ ಏಕೆ? ಇಡೀ‌ ದೇಶಕ್ಕೆ ಕೊಡಲಿ. ಪ್ರಧಾನಿ ನರೇಂದ್ರ ಮೋದಿ ತಪ್ಪಿನಿಂದ ಕೊರೊನಾ ಬಂದಿದೆ. ಟ್ರಂಪ್ ಕಾರ್ಯಕ್ರಮದಿಂದ ಕೊರೊನಾ ಸೋಂಕು ಹರಡಿದೆ. 70-80 ಲಕ್ಷ ಸೋಂಕಿತರ ಶಾಪ ಬಿಜೆಪಿಗೆ ತಟ್ಟಲಿದೆ. ಯಾರಪ್ಪನ ದುಡ್ಡು? ಇಡೀ ದೇಶಕ್ಕೆ‌ ಉಚಿತ ಲಸಿಕೆ‌ ನೀಡಲಿ ಎಂದು ಕಾಂಗ್ರೆಸ್​ ಶಾಸಕ ರಾಮಲಿಂಗಾ ರೆಡ್ಡಿ […]

‘ಇನ್ನೂ ತಯಾರಿಯೇ ಆಗದ ವ್ಯಾಕ್ಸಿನ್‌ನಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ!’
ರಾಮಲಿಂಗಾರೆಡ್ಡಿ
Follow us
ಸಾಧು ಶ್ರೀನಾಥ್​
| Updated By: KUSHAL V

Updated on:Oct 24, 2020 | 12:09 PM

ಚಿತ್ರದುರ್ಗ: ಇನ್ನೂ ತಯಾರಿಯೇ ಆಗದ ಕೊರೊನಾ ವ್ಯಾಕ್ಸಿನ್‌ನಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ವ್ಯಾಕ್ಸಿನ್‌ ಅನ್ನು ಬಿಹಾರಕ್ಕೆ ಮಾತ್ರ ಉಚಿತ ಏಕೆ? ಇಡೀ‌ ದೇಶಕ್ಕೆ ಕೊಡಲಿ. ಪ್ರಧಾನಿ ನರೇಂದ್ರ ಮೋದಿ ತಪ್ಪಿನಿಂದ ಕೊರೊನಾ ಬಂದಿದೆ. ಟ್ರಂಪ್ ಕಾರ್ಯಕ್ರಮದಿಂದ ಕೊರೊನಾ ಸೋಂಕು ಹರಡಿದೆ. 70-80 ಲಕ್ಷ ಸೋಂಕಿತರ ಶಾಪ ಬಿಜೆಪಿಗೆ ತಟ್ಟಲಿದೆ. ಯಾರಪ್ಪನ ದುಡ್ಡು? ಇಡೀ ದೇಶಕ್ಕೆ‌ ಉಚಿತ ಲಸಿಕೆ‌ ನೀಡಲಿ ಎಂದು ಕಾಂಗ್ರೆಸ್​ ಶಾಸಕ ರಾಮಲಿಂಗಾ ರೆಡ್ಡಿ ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್ ಎಲ್ಲಿ ಗೂಂಡಾಗಿರಿ ಮಾಡಿದ್ದಾರೆ ಹೇಳಲಿ. ಬಿಜೆಪಿಯಲ್ಲೇ ಹೆಚ್ಚು ಗೂಂಡಾಗಳು ಇರುವುದು. ಸಂಸದರಾದ ಶೋಭಾ ಕರಂದ್ಲಾಜೆ, ಅನಂತಕುಮಾರ ಹೆಗ್ಡೆ, ಸಚಿವ ಸಿ.ಟಿ.ರವಿ ಮಾತಿಗೆ ಕಿಮ್ಮತ್ತಿಲ್ಲ ಎಂದು ಚಿತ್ರದುರ್ಗದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Published On - 12:08 pm, Sat, 24 October 20