ಇದು ‘ನಮ್ಮ ಏರಿಯಾ’ಗೆ ಬರುತ್ತಾ? ಮಳೆ ಸಂಕಷ್ಟದಲ್ಲೂ ‘ಸಾಮ್ರಾಟ್​’ರಿಗೆ ವ್ಯಾಪ್ತಿ ಗೊಂದಲ!

ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್​ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ. ಇಂಟರೆಸ್ಟಿಂಗ್​ ಸುದ್ದಿಯೆಂದರೆ ಸಚಿವರು ಭೇಟಿ ಕೊಟ್ಟ ವೇಳ ಕೊಂಚ ಕನ್ಫ್ಯೂಸ್​ ಆಗಿಹೋದರು. ಇದು ನಮ್ಮ […]

ಇದು ‘ನಮ್ಮ ಏರಿಯಾ’ಗೆ ಬರುತ್ತಾ? ಮಳೆ ಸಂಕಷ್ಟದಲ್ಲೂ ‘ಸಾಮ್ರಾಟ್​’ರಿಗೆ ವ್ಯಾಪ್ತಿ ಗೊಂದಲ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 24, 2020 | 12:12 PM

ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್​ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ.

ಇಂಟರೆಸ್ಟಿಂಗ್​ ಸುದ್ದಿಯೆಂದರೆ ಸಚಿವರು ಭೇಟಿ ಕೊಟ್ಟ ವೇಳ ಕೊಂಚ ಕನ್ಫ್ಯೂಸ್​ ಆಗಿಹೋದರು. ಇದು ನಮ್ಮ ಏರಿಯಾಗೆ ಬರುತ್ತಾ ಅಥವಾ RR ನಗರಕ್ಕೆ ಸೇರುತ್ತಾ ಅಂತಾ ಸ್ಥಳೀಯ ಮಾಜಿ ಕಾರ್ಪೋರೇಟರ್ ಪತಿ ರಾಜೇಶ್ವರಿ ಚೋಳರಾಜ ಬಳಿ ಅಶೋಕ್​ ಪ್ರಶ್ನೆ ಮಾಡಿದರಂತೆ.

ಅದಕ್ಕೆ ಮಾಜಿ ಕಾರ್ಪೋರೇಟರ್ ಪತಿ ಇದು ನಮ್ಮ ಏರಿಯಾನೆ ಸಾರ್ ಅಂತಾ ಸಚಿವರಿಗೆ ಕನ್ಫರ್ಮ್​ ಮಾಹಿತಿ ಕೊಟ್ಟರಂತೆ. ಜೊತೆಗೆ, ಬೆಳಗ್ಗೆಯಿಂದ ಊಟ ಕೊಟ್ಟಿದ್ದೀವಿ, ನೀರು ಕೊಟ್ಟಿದ್ದೀ ಅಂತಾ ಮಾಹಿತಿ ಸಹ ಹೇಳಿದರಂತೆ.

ಅದೇ ವೇಳೆ, ಸಾರ್ ನಮ್ಮ ಮನೆ ನೋಡಿ ಅಂತಾ ಕೆಲ ಹಿರಿಯರು ಸಚಿವ ಆರ್ ಅಶೋಕ್​ಗೆ ಕೇಳಿಕೊಂಡರು. ಆಗ, ಕಾಂಪೌಂಡ್ ಹೊರ ಭಾಗದಿಂದಲೇ ಸಚಿವರು ನೋಡಿ ಹೊರಟು ಹೋದರು. ಈ ನಡುವೆ, ಅಕ್ಕಪಕ್ಕದ ಮನೆಯವರು ಸಾರ್ ಸಾರ್ ಅಂತಾ ಕೂಗಾಡಿದ್ರು ಸಚಿವರು ಜಾಣ ಕಿವುಡುತನ ತೋರಿ ಅಲ್ಲಿಂದ ಕಾಲ್ಕಿತ್ತರು.

ಯಾವುದೇ ಮನೆಯ ಒಳಗೆ ಹೋಗದೆ ಕೇವಲ ರೋಡ್ ಮಾತ್ರ ವೀಕ್ಷಣೆ ಮಾಡ್ತಿದ್ದಾರಂತೆ ಸಚಿವ ಅಶೋಕ್. ಸಾರ್ ನೋಡಿ ನಮ್ಮ ಮನೆಗೆ ನೀರು ನುಗ್ಗಿದೆ ಅಂತಾ ಸ್ಥಳೀಯರು ದೂರಿದಾಗ.. ಸಚಿವರು ಸಿಎಂ ಮನೆಗೆ ಹೋಗಿ ಮತ್ತೆ ಬರ್ತೀನಿ ಅಂತಾ ಹೇಳಿ ಕಾರ್ ಹತ್ತಿ ಹೊರಟೇ ಬಿಟ್ಟರಂತೆ!

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು