ಅಕ್ರಮ ಮರಳು ಸಾಗಾಟ ದೂರು ದಾಖಲಿಸಿದಕ್ಕೆ ಪೊಲೀಸ್ ಠಾಣೆಗೆ ನುಗ್ಗಿ BJP ನಾಯಕನ ದರ್ಪ

| Updated By: ಸಾಧು ಶ್ರೀನಾಥ್​

Updated on: Sep 21, 2020 | 9:58 AM

ಹಾಸನ: ಅಕ್ರಮ ಮರಳು ಸಾಗಾಟ ವಿರುದ್ಧ ದೂರು ದಾಖಲು ಮಾಡಿದ ಹಿನ್ನೆಲೆಯಲ್ಲಿ ಅರೆಹಳ್ಳಿ ಪೊಲೀಸ್ ಠಾಣೆಗೆ ಬಿಜೆಪಿ‌ ಕಾರ್ಯಕರ್ತರು ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್‌ ನೇತೃತ್ವದಲ್ಲಿ ಬೆಮಬಲಿಗರು ಬೇಲೂರು ತಾಲೂಕಿನ ಅರೆಹಳ್ಳಿ ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಪೂರ್ಣ ವಿವರ ಸಿಸಿ‌ ಕ್ಯಾಮೆರಾದಲ್ಲಿ ದಾಖಲಾಗಿದೆಯಂತೆ. ಈ ಹಿಂದೆ ದೂರು ದಾಖಲಿಸಿದ್ದ PSI ವರ್ಗಾವಣೆಯಾಗಿದೆ. ನೀವು ಅದೇ ರೀತಿ ಮಾಡಿದರೆ ಎತ್ತಂಗಡಿ ಮಾಡಿಸುತ್ತೇವೆ […]

ಅಕ್ರಮ ಮರಳು ಸಾಗಾಟ ದೂರು ದಾಖಲಿಸಿದಕ್ಕೆ ಪೊಲೀಸ್ ಠಾಣೆಗೆ ನುಗ್ಗಿ BJP ನಾಯಕನ ದರ್ಪ
Follow us on

ಹಾಸನ: ಅಕ್ರಮ ಮರಳು ಸಾಗಾಟ ವಿರುದ್ಧ ದೂರು ದಾಖಲು ಮಾಡಿದ ಹಿನ್ನೆಲೆಯಲ್ಲಿ ಅರೆಹಳ್ಳಿ ಪೊಲೀಸ್ ಠಾಣೆಗೆ ಬಿಜೆಪಿ‌ ಕಾರ್ಯಕರ್ತರು ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್‌ ನೇತೃತ್ವದಲ್ಲಿ ಬೆಮಬಲಿಗರು ಬೇಲೂರು ತಾಲೂಕಿನ ಅರೆಹಳ್ಳಿ ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಪೂರ್ಣ ವಿವರ ಸಿಸಿ‌ ಕ್ಯಾಮೆರಾದಲ್ಲಿ ದಾಖಲಾಗಿದೆಯಂತೆ. ಈ ಹಿಂದೆ ದೂರು ದಾಖಲಿಸಿದ್ದ PSI ವರ್ಗಾವಣೆಯಾಗಿದೆ. ನೀವು ಅದೇ ರೀತಿ ಮಾಡಿದರೆ ಎತ್ತಂಗಡಿ ಮಾಡಿಸುತ್ತೇವೆ ಎಂದು ಎಸ್‌ಐಗೆ ಬಿಜೆಪಿ ಕಾರ್ಯಕರ್ತರು ಆವಾಜ್ ಹಾಕಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ ಸಂಬಂಧ ರೌಡಿಶೀಟರ್‌ಗಳಾದ ಮಧು, ಭರತ್ ವಿರುದ್ಧ ಕೇಸ್ ದಾಖಲಾಗಿತ್ತು. ಇವರಿಬ್ಬರು ಹೆಚ್.ಕೆ.ಸುರೇಶ್‌ ಆಪ್ತರು. ಹೀಗಾಗಿ ಬಿಜೆಪಿ ಕಾರ್ಯಕರ್ತರ ಜತೆ ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ.