‘ಸಾರಿಗೆ ಮುಷ್ಕರದಲ್ಲಿ ಭಾಗಿಯಾಗೋಕೆ ಕನಿಷ್ಠ ಪಕ್ಷ ಖಾಕಿ ಬಟ್ಟೆಯಾದ್ರೂ ಹಾಕಲು ಹೇಳೋದಲ್ವಾ!’

|

Updated on: Dec 15, 2020 | 5:58 PM

ಸಾರಿಗೆ ನೌಕರರ ಹೋರಾಟದಲ್ಲಿ ಭಾಗಿಯಾಗಲು ಕನಿಷ್ಠ ಪಕ್ಷ ಖಾಕಿ ಬಟ್ಟೆಯಾದರೂ ಹಾಕೋಬೇಕು ಅಂತಾ ಸರ್ಕಾರ ಹೇಳೋದಲ್ವಾ! ಹಸಿರು ಶಾಲ್ ಹಾಕಿಕೊಂಡು ಸಾರಿಗೆ ಇಲಾಖೆ ನೌಕರರ ಹೋರಾಟದಲ್ಲಿ ಭಾಗಿಯಾಗ್ತಾರೆ ಎಂದು ರೇವಣ್ಣ ವ್ಯಂಗ್ಯವಾಡಿದರು.

‘ಸಾರಿಗೆ ಮುಷ್ಕರದಲ್ಲಿ ಭಾಗಿಯಾಗೋಕೆ ಕನಿಷ್ಠ ಪಕ್ಷ ಖಾಕಿ ಬಟ್ಟೆಯಾದ್ರೂ ಹಾಕಲು ಹೇಳೋದಲ್ವಾ!’
H.D.ರೇವಣ್ಣ (ಎಡ); ಕೋಡಿಹಳ್ಳಿ ಚಂದ್ರಶೇಖರ್​ (ಬಲ)
Follow us on

ಹಾಸನ: ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ವೈದ್ಯರನ್ನು ನೇಮಿಸುವಂತೆ ಹೇಳಿ ಹೇಳಿ ಸಾಕಾಗಿದೆ. ಕೂಡಲೇ ವೈದ್ಯರನ್ನು ನೇಮಿಸುವಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗ್ರಹಿಸಿದರು. ಜೊತೆಗೆ, ವಿಧಾನಪರಿಷತ್‌ನಲ್ಲಿ ನಡೆದ ಗಲಾಟೆ ಬಗ್ಗೆ ಮಾತನಾಡಲ್ಲ. ಇದರ ಬಗ್ಗೆ ರಾಜ್ಯದ ಜನರೇ ನಿರ್ಧಾರ ಮಾಡಲಿ ಎಂದು ಹೇಳಿ ಸುಮ್ಮನಾದರು.

ಆದರೆ, ಸಾರಿಗೆ ನೌಕರರ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾದ ವಿಚಾರವಾಗಿ ರೇವಣ್ಣ ಫುಲ್​ ಬ್ಯಾಟಿಂಗ್​ ಮಾಡಿದ್ದಾರೆ. ಸಹೋದರನ ಮೇಲೆ ಟೀಕೆ ಮಾಡಿದ ಕಾರಣಕ್ಕೋ ಏನೋ ಗೊತ್ತಿಲ್ಲ, ಆದರೆ ಮಾಜಿ ಸಚಿವರು ಕೋಡಿಹಳ್ಳಿಗೆ ಟಾಂಗ್​ ಕೊಡೋಕೆ ಮುಂದಾದರು.

ಸಾರಿಗೆ ನೌಕರರ ಹೋರಾಟದಲ್ಲಿ ಭಾಗಿಯಾಗಲು ಕನಿಷ್ಠ ಪಕ್ಷ ಖಾಕಿ ಬಟ್ಟೆಯಾದರೂ ಹಾಕೋಬೇಕು ಅಂತಾ ಅವರಿಗೆ ಸರ್ಕಾರ ಹೇಳೋದಲ್ವಾ! ಹಸಿರು ಶಾಲು ಹಾಕಿಕೊಂಡು ಅವರು ಸಾರಿಗೆ ಇಲಾಖೆ ನೌಕರರ ಹೋರಾಟದಲ್ಲಿ ಭಾಗಿಯಾಗ್ತಾರೆ ಎಂದು ರೇವಣ್ಣ ವ್ಯಂಗ್ಯವಾಡಿದರು.

ರೈತರು ಸಂಕಷ್ಟದಲ್ಲಿ ಇದ್ದಾರೆ ಅವರ ಬಗ್ಗೆ ಯಾರೂ ಮಾತನಾಡಲ್ಲ. ಸರ್ಕಾರ ಇಂತಹವರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಸಾರಿಗೆ ಇಲಾಖೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಮಾಡಿ ಎಂದು ಕೇಳ್ತಾರೆ. ಹಾಗಾದ್ರೆ, ನಾಳೆ ಡೈರಿ ನೌಕರರನ್ನು ಸರ್ಕಾರಿ‌ ನೌಕರರನ್ನಾಗಿ ಮಾಡ್ತೀರಾ? ಎಂದು ಪ್ರಶ್ನಿಸಿದರು. ಅವರಿಗೆ ಏನು ಸೌಲಭ್ಯ ಕೊಡಬೇಕೋ ಅದನ್ನ ಕೊಡಿ. ಅದು ಬಿಟ್ಟು ಏನೇನೋ ಕೇಳಬಾರದು ಎಂದು ರೇವಣ್ಣ ಕೋಡಿಹಳ್ಳಿಗೆ ಟಾಂಗ್​ ಕೊಟ್ಟರು.

ಕೋಡಿಹಳ್ಳಿ ಚಂದ್ರಶೇಖರ್​ ಹಸಿರು ಟವೆಲ್​ ಬಿಟ್ಟು ರಾಜಕಾರಣಿಯಾಗಲಿ: ಬಡಗಲಪುರ ನಾಗೇಂದ್ರ ವ್ಯಂಗ್ಯ