ಎಲೆಕೋಸಿನ ನೀರನ್ನು ಕುಡಿದರೆ (cabbage water) ತುಂಬಾ ಅರೋಗ್ಯ ಪ್ರಯೋಜನಗಳಿವೆ. ಎಲೆ ಕೋಸಿನಲ್ಲಿ ವಿಟಮಿನ್-ಎ, ವಿಟಮಿನ್-ಬಿ, ವಿಟಮಿನ್-ಸಿ ಮತ್ತು ವಿಟಮಿನ್-ಕೆ ಸಮೃದ್ಧವಾಗಿ ಇವೆ. ಇದಕ್ಕೆ ಹೆಚ್ಚುವರಿಯಾಗಿ ಇತರ ಖನಿಜಗಳಾದ ಪೊಟಾಸಿಮ್, ಮೆಗ್ನಿಸಿಯಮ್ ಮತ್ತು ಕಾಲ್ಸಿಯಮ್ ಗಳನ್ನೂ ಕೂಡ ಒಳಗೊಂಡಿದೆ. ಎಲೆಕೋಸಿನ (cabbage) ನೀರನ್ನು ಸೇವಿಸುವುದರಿಂದ ಅನೇಕ ಅರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ (health benefits).
ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿರುವ ರೋಗಕಾರಕ ಅಂಶಗಳ ವಿರುದ್ಧ ಹೋರಾಡಲು ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಎಲೆಕೋಸು ಬೀಟಾ ಕೆರಾಟಿನ್ ಅನ್ನು ಒಳಗೊಂಡಿರುತ್ತದೆ. ಇದು ನಮ್ಮ ಕಣ್ಣಿನ ದೃಷ್ಟಿಯ ಆರೋಗ್ಯವನ್ನು ಕಾಪಾಡಲು ಸಹಾಯಮಾಡುತ್ತದೆ. ನಿಯಮಿತವಾಗಿ ಎಲೆಕೋಸಿನ ನೀರನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಅಗತ್ಯವಾದ ಫೈಟೋ ಕೆಮಿಕಲ್ಸ್ ಮತ್ತು ಆಂಟಿ ಅಕ್ಸಿರಿನ್ ಗಳು ಇರುತ್ತದೆ. ಆದಕಾರಣ ಚರ್ಮದ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗವ ಅಂಶವನ್ನು ತಡೆಗಟ್ಟುತ್ತವೆ.
ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು Vitamin K ಬಹಳ ಸಹಕಾರಿ, ಅದು ಈ ತರಕಾರಿಯಲ್ಲಿ ಸಮೃದ್ಧವಾಗಿದೆ
ಎಲೆಕೋಸು ಪೊಟಾಸಿಮ್, ಮೆಗ್ನಿಸಿಯಮ್ ಮತ್ತು ಕಾಲ್ಸಿಯುಮ್ ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಮೂಳೆಗಳು ಕ್ಷೀಣಿಸುವುದು ಮತ್ತು ದುರ್ಬಲಗೊಳಿಸುವುದನ್ನು ತಡೆಯುವುದರಲ್ಲಿ ಈ ಎಲ್ಲ ಸಂಯೋಜನೆಗಳು ಒಟ್ಟಾಗಿ ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯುವುದು ಉತ್ತಮ. ನೀವು ಹೆಚ್ಚಿನ ಆಲ್ಕೋಹಾಲ್ ಸೇವಿಸಿದಾಗ ಮರುದಿನ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯಿರಿ. ಶ್ರೀಮಂತ ಉತ್ಕರ್ಷಣ ನಿರೋಧಕ ಗುಣಗಳ ಕಾರಣದಿಂದಾಗಿ ಎಲೆಕೋಸಿನ ನೀರು ಹೊಟ್ಟೆ ಮತ್ತು ಯಕೃತ್ ಅನ್ನು ನಿರ್ವಿಷ ಗೊಳಿಸುವಲ್ಲಿ ಸಹಾಯಮಾಡುತ್ತದೆ.
ಎಲೆಕೋಸಿನ ನೀರು ಸೇವಿಸುವುದು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಎಲೆಕೋಸು ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸಮೃದ್ಧವಾಗಿ ನೀಡುತ್ತದೆ. ಯಾವುದೇ ಹೆಚ್ಚುವರಿ ಕೊಬ್ಬು ಅಥವಾ ಕ್ಯಾಲೋರಿಗಳನ್ನು ಹೊಂದಿರುವುದಿಲ್ಲ. ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ.
Published On - 3:39 pm, Sat, 10 June 23