ಬಳ್ಳಾರಿ: ಕಿಲ್ಲರ್ ಕೊರೊನಾ ಇಡೀ ದೇಶವನ್ನು ನಲುಗಿಸಿಬಿಟ್ಟಿದೆ. ಕಣ್ಣಿಗೆ ಕಾಣದ ಚಿಕ್ಕ ವೈರಸ್ ಜನರ ಜೀವ ಹಿಂಡಿದೆ. ಬದುಕನ್ನ ಕಸಿದುಕೊಂಡಿದೆ. ಎಂದೋ ಶುರುವಾಗಿದ್ದ ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಘನಘೋರವಾಗಿದೆ. ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ ಎರಡು ಶವಗಳನ್ನು ಎಸೆದು ಮಣ್ಣು ಮಾಡುವ ದೃಶ್ಯ ಕಂಡು ಬಂದಿದೆ. ಕೊರೊನಾದಿಂದ ಸಾವನ್ನಪ್ಪಿದ್ದವರ ಅಂತ್ಯಕ್ರಿಯೆ ಬೆಚ್ಚಿ ಬೀಳಿಸುವಂತಿದೆ. ಸಿಬ್ಬಂದಿಗಳು 2ರಿಂದ 3 ಶವಗಳನ್ನ ಒಂದೇ ಗುಂಡಿಗೆ ಎಸೆಯುತ್ತಿದ್ದಾರೆ. ಧರ ಧರನೇ ಶವಗಳನ್ನ ಎಳೆಯುತ್ತಿರುವ ದೃಶ್ಯ ಅಮಾನವೀಯವಾಗಿದೆ.
ಈ ರೀತಿ ಸಿಬ್ಬಂದಿ ಕೊರೊನಾದಿಂದ ಮೃತಪಟ್ಟವರು ಅಂತ್ಯಕ್ರಿಯೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಜೊತೆಗೆ ಆಕ್ರೋಶ ವ್ಯಕ್ತವಾಗಿದೆ. ಸೋಂಕಿನಿಂದ ಮೃತಪಟ್ಟವರ ಶವವನ್ನು ಕುಟುಂಬಸ್ಥರಿಗೆ ಹಸ್ತಾರಿಸಿದರೆ ಸೋಂಕು ಮತ್ತಷ್ಟು ಹರಡುವ ಭೀತಿ ಇದೆ. ಹೀಗಾಗಿ ಸಿಬ್ಬಂದಿಯೇ ಅಂತ್ಯಕ್ರಿಯೆ ಮಾಡ್ತಾರೆ. ಆದರೆ ಈ ರೀತಿ ಶವವನ್ನು ಧರ ಧರನೇ ಎಳೆದು ಗುಂಡಿಯಲ್ಲಿ ಎಸೆಯುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಹೆಚ್ಚುತ್ತಿದೆ.
Published On - 8:52 am, Tue, 30 June 20