ಬೆಂಗಳೂರಿನಲ್ಲಿ ಧಾರಾಕಾರ ಮಳೆ, ವೃಷಭಾವತಿ ಕಾಲುವೆಯ ತಡೆಗೋಡೆ ಕುಸಿತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರಾಜಾಜಿನಗರ, ಮೇಖ್ರಿ ಸರ್ಕಲ್, ಸದಾಶಿವನಗರ, ಮೆಜೆಸ್ಟಿಕ್, ಶಾಂತಿನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಭಾರಿ ವರ್ಷಧಾರೆಯಾಗುತ್ತಿದೆ. ಧಾರಾಕಾರ ಮಳೆಗೆ ಕೆಂಗೇರಿ ಬಳಿ ಬಿಡಿಎ ವಸತಿ ಸಮುಚ್ಚಯದ ಬಳಿ ರಸ್ತೆಯ ಭಾಗ ಕುಸಿತವಾಗಿದೆ. ವೃಷಭಾವತಿ ಕಾಲುವೆಯ ನೀರಿನ ರಭಸಕ್ಕೆ ಸುಮಾರು 100 ಅಡಿ ರಸ್ತೆಯ ಭಾಗ ಕುಸಿತವಾಗಿದೆ. ಭಾರೀ ಮಳೆಯಿಂದ ವೃಷಭಾವತಿ ಕಾಲುವೆಯ ತಡೆಗೋಡೆಯೂ ಕುಸಿತವಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ […]
Follow us on
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರಾಜಾಜಿನಗರ, ಮೇಖ್ರಿ ಸರ್ಕಲ್, ಸದಾಶಿವನಗರ, ಮೆಜೆಸ್ಟಿಕ್, ಶಾಂತಿನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಭಾರಿ ವರ್ಷಧಾರೆಯಾಗುತ್ತಿದೆ.
ಧಾರಾಕಾರ ಮಳೆಗೆ ಕೆಂಗೇರಿ ಬಳಿ ಬಿಡಿಎ ವಸತಿ ಸಮುಚ್ಚಯದ ಬಳಿ ರಸ್ತೆಯ ಭಾಗ ಕುಸಿತವಾಗಿದೆ. ವೃಷಭಾವತಿ ಕಾಲುವೆಯ ನೀರಿನ ರಭಸಕ್ಕೆ ಸುಮಾರು 100 ಅಡಿ ರಸ್ತೆಯ ಭಾಗ ಕುಸಿತವಾಗಿದೆ.
ಭಾರೀ ಮಳೆಯಿಂದ ವೃಷಭಾವತಿ ಕಾಲುವೆಯ ತಡೆಗೋಡೆಯೂ ಕುಸಿತವಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.