ಸಿಲಿಕಾನ್ ಸಿಟಿ ಜನರೇ ಇಂದು ರಸ್ತೆಗೆ ಇಳಿಯದಿದ್ದರೆಯೇ ಒಳಿತು

ಬೆಂಗಳೂರು: ಕೃಷಿ ಮಸೂದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಹೀಗಾಗಿ ನಗರದಲ್ಲಿ ಹಲವೆಡೆ ಪ್ರತಿಭಟನೆ ಕೈಗೊಳ್ಳಲಾಗಿದೆ. ಈ ಪ್ರತಿಭಟನೆ ಬಿಸಿಯಿಂದಾಗಿ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಸಿಲಿಕಾನ್ ಸಿಟಿ ಕಂಪ್ಲೀಟ್ ಲಾಕ್ ಆಗಿದೆ. ಸಿಟಿಯಲ್ಲಿ ಇಂದು ರಸ್ತೆಗಿಳಿಯುವ ಮುನ್ನಾ ಜನ ಯೋಚಿಸಬೇಕಿದೆ. ಬೆಂಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಬಿಸಿ ಕಾಣುತ್ತಿದೆ. ಟೌನ್ ಹಾಲ್ ಜಂಕ್ಷನ್, ಮೈಸೂರು ಬ್ಯಾಂಕ್ ವೃತ್ತ ಬಳಿಯ ಎಲ್ಲ ರಸ್ತೆಗಳು, ಕಾರ್ಪೊರೇಷನ್, ಕೆ ಆರ್ ವೃತ್ತ, ಆನಂದ್ […]

ಸಿಲಿಕಾನ್ ಸಿಟಿ ಜನರೇ ಇಂದು ರಸ್ತೆಗೆ ಇಳಿಯದಿದ್ದರೆಯೇ ಒಳಿತು

Updated on: Sep 28, 2020 | 7:24 AM

ಬೆಂಗಳೂರು: ಕೃಷಿ ಮಸೂದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಹೀಗಾಗಿ ನಗರದಲ್ಲಿ ಹಲವೆಡೆ ಪ್ರತಿಭಟನೆ ಕೈಗೊಳ್ಳಲಾಗಿದೆ. ಈ ಪ್ರತಿಭಟನೆ ಬಿಸಿಯಿಂದಾಗಿ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಸಿಲಿಕಾನ್ ಸಿಟಿ ಕಂಪ್ಲೀಟ್ ಲಾಕ್ ಆಗಿದೆ.

ಸಿಟಿಯಲ್ಲಿ ಇಂದು ರಸ್ತೆಗಿಳಿಯುವ ಮುನ್ನಾ ಜನ ಯೋಚಿಸಬೇಕಿದೆ. ಬೆಂಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಬಿಸಿ ಕಾಣುತ್ತಿದೆ. ಟೌನ್ ಹಾಲ್ ಜಂಕ್ಷನ್, ಮೈಸೂರು ಬ್ಯಾಂಕ್ ವೃತ್ತ ಬಳಿಯ ಎಲ್ಲ ರಸ್ತೆಗಳು, ಕಾರ್ಪೊರೇಷನ್, ಕೆ ಆರ್ ವೃತ್ತ, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್, ಮೌರ್ಯ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು, ಲಗ್ಗರೆ ಜಂಕ್ಷನ್, ರಾಜಕುಮಾರ್ ಸಮಾಧಿ ರಸ್ತೆ, ಸುಮ್ಮನಹಳ್ಳಿ ಸರ್ಕಲ್ ಪುಲ್ ಜಾಮ್ ಆಗಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.