ಹೇಮಾವತಿ ನೀರು ಜಮೀನಿಗೆ ನುಗ್ಗಿ ಬೆಳೆ ನಾಶ, ಪರಿಹಾರಕ್ಕೆ ರೈತರ ಪಟ್ಟು

ತುಮಕೂರು: ರೈತರ ಜಮೀನಿಗೆ ಹೇಮಾವತಿ ನೀರು ನುಗ್ಗಿದ ಘಟನೆ ನಡೆದಿದೆ‌. ಇದ್ರಿಂದ ಸುಮಾರು 3 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ‌. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅರವೇಸಂದ್ರ ಗ್ರಾಮದ ರೇಣುಕಾರಾಧ್ಯ ಎನ್ನುವವರ ಬೆಳೆ ನಾಶವಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬದನೆ ಹಾಗೂ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಸೌತೆಕಾಯಿ ನಾಶವಾಗಿದೆ‌. ಇದ್ರಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟವಾಗಿದೆ. ಇನ್ನೂ ಹೇಮಾವತಿ ನಾಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. […]

ಹೇಮಾವತಿ ನೀರು ಜಮೀನಿಗೆ ನುಗ್ಗಿ ಬೆಳೆ ನಾಶ, ಪರಿಹಾರಕ್ಕೆ ರೈತರ ಪಟ್ಟು

Updated on: Jun 01, 2020 | 2:55 PM

ತುಮಕೂರು: ರೈತರ ಜಮೀನಿಗೆ ಹೇಮಾವತಿ ನೀರು ನುಗ್ಗಿದ ಘಟನೆ ನಡೆದಿದೆ‌. ಇದ್ರಿಂದ ಸುಮಾರು 3 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ‌. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅರವೇಸಂದ್ರ ಗ್ರಾಮದ ರೇಣುಕಾರಾಧ್ಯ ಎನ್ನುವವರ ಬೆಳೆ ನಾಶವಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬದನೆ ಹಾಗೂ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಸೌತೆಕಾಯಿ ನಾಶವಾಗಿದೆ‌.

ಇದ್ರಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟವಾಗಿದೆ. ಇನ್ನೂ ಹೇಮಾವತಿ ನಾಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕ ನಾಲಾ ಕಾಮಗಾರಿಯಿಂದ, ಎಡವಟ್ಟಿನಿಂದ ಹೇಮಾವತಿ ನೀರು ತೋಟಕ್ಕೆ ನುಗ್ಗಿದೆ ಎನ್ನಲಾಗುತ್ತಿದೆ. ಅಧಿಕಾರಿಗಳ ಎಡವಟ್ಟಿನಿಂದ ಈ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ ಪರಿಹಾರ ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ.

Published On - 12:23 pm, Mon, 1 June 20