ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ಪಲ್ಪ ಕಹಿ: ಸುಪ್ರೀಂಕೋರ್ಟ್​ ಹೇಳಿದ್ದೇನು?

ಬೆಂಗಳೂರು: ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ. ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎಂಬಂತೆ ಇಂದು ಸುಪ್ರೀಂಕೋರ್ಟ್​ನಿಂದ ತೀರ್ಪು ಬಂದಿದೆ. ಸುಪ್ರೀಂ ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ: * ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ವಿಪಕ್ಷಗಳಿಗೆ ತನ್ನದೇ ಆದ ಹೊಣೆಗಾರಿಕೆಗಳಿವೆ * ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯವಿರೋಧ ಪಕ್ಷ, ಆಡಳಿತ ಪಕ್ಷ ಎರಡರಲ್ಲೂ ನೈತಿಕತೆ ಇರಬೇಕು * ಅನರ್ಹ ಶಾಸಕರು ಮೊದಲು ಹೈಕೋರ್ಟ್​ಗೆ ಅರ್ಜಿ […]

ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ಪಲ್ಪ ಕಹಿ: ಸುಪ್ರೀಂಕೋರ್ಟ್​ ಹೇಳಿದ್ದೇನು?
ಸಾಧು ಶ್ರೀನಾಥ್​

Updated on: Nov 13, 2019 | 1:07 PM

ಬೆಂಗಳೂರು: ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ. ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎಂಬಂತೆ ಇಂದು ಸುಪ್ರೀಂಕೋರ್ಟ್​ನಿಂದ ತೀರ್ಪು ಬಂದಿದೆ.

ಸುಪ್ರೀಂ ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ:
* ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ವಿಪಕ್ಷಗಳಿಗೆ ತನ್ನದೇ ಆದ ಹೊಣೆಗಾರಿಕೆಗಳಿವೆ
* ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯವಿರೋಧ ಪಕ್ಷ, ಆಡಳಿತ ಪಕ್ಷ ಎರಡರಲ್ಲೂ ನೈತಿಕತೆ ಇರಬೇಕು
* ಅನರ್ಹ ಶಾಸಕರು ಮೊದಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಬೇಕಿತ್ತು
* ಅನರ್ಹ ಶಾಸಕರು ನೇರವಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಬಾರದಿತ್ತು
* ಎರಡೆರಡು ವಿಚಾರಣೆ ಬೇಡ ಅಂತಾ ನಾವೇ ವಿಚಾರಣೆ ಮಾಡಿದ್ದೇವೆ
* ಅನರ್ಹರು ನೇರವಾಗಿ ಸುಪ್ರೀಂಕೋರ್ಟ್​ಗೆ ಬಂದ ನಡೆಯನ್ನ ನಾವು ಸ್ವಾಗತಿಸಲ್ಲ
* ಸ್ಪೀಕರ್ ಆದೇಶ ಮತ್ತು ನಡೆಯನ್ನ ನಾವು ಪರಿಶೀಲಿಸಿದ್ದೇವೆ
* ಸ್ಪೀಕರ್ ಆದೇಶವನ್ನ ಭಾಗಶಃ ಎತ್ತಿ ಹಿಡಿಯುತ್ತಿದ್ದೇವೆ
* 17 ಮಂದಿಯ ಅನರ್ಹತೆ ಮುಂದುವರಿಯಲಿದೆ
* ಅನರ್ಹರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇದೆ
* ಅನರ್ಹರು ಉಪಚುನಾವಣೆಗೆ ಸ್ಪರ್ಧಿಸಬಹುದು
* ವಿಧಾನಸಭೆ ಅವಧಿ ಮುಗಿಯುವವರೆಗೂ ಅನರ್ಹರಲ್ಲ
* ಸ್ಪೀಕರ್ ಅನರ್ಹತೆಗೆ ವಿಧಿಸಿದ್ದ ಕಾಲಾವಧಿ ಸರಿ ಇಲ್ಲ
* ಸ್ಪೀಕರ್ ಅನರ್ಹತೆಗೆ ಕಾಲಾವಧಿ ನಿರ್ಧರಿಸುವಂತಿಲ್ಲ
* ಅನರ್ಹ ಶಾಸಕರು ಸದ್ಯಕ್ಕೆ ಮಂತ್ರಿಯಾಗುವಂತಿಲ್ಲ
* ಚುನಾವಣೆಯಲ್ಲಿ ಗೆದ್ದು ಬರೋವರೆಗೆ ಮಂತ್ರಿಯಾಗುವಂತಿಲ್ಲ
* ಸರ್ಕಾರದ ಯಾವುದೇ ಹುದ್ದೆಯನ್ನ ಅನರ್ಹರು ಅಲಂಕರಿಸುವಂತಿಲ್ಲ
* ಕುದುರೆ ವ್ಯಾಪಾರ ನಡೆಯಬಾರದು, ಪ್ರಜಾಪ್ರಭುತ್ವಕ್ಕೆ ಮಾರಕ
* ಶಾಸಕರು ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ರಾಜೀನಾಮೆ ಅಂಗೀಕರಿಸಬೇಕು
* ಸ್ಪೀಕರ್​ಗೆ ರಾಜೀನಾಮೆ ಅಂಗೀಕರಿಸುವುದು ಬಿಟ್ಟು ಬೇರೆ ಆಯ್ಕೆ ಇಲ್ಲ
* ಅನರ್ಹತೆಗೂ ರಾಜೀನಾಮೆ ಸ್ವೀಕಾರಕ್ಕೂ ಯಾವುದೇ ಸಂಬಂಧವಿಲ್ಲ
* ಸ್ಪೀಕರ್​ಗಿರುವ ಅನರ್ಹತೆಗೊಳಿಸುವ ಹಕ್ಕು ಹಾಗೆಯೇ ಇರುತ್ತದೆ
* ಸ್ಪೀಕರ್ ರಾಜೀನಾಮೆ ಸ್ವಇಚ್ಛೆಯಿಂದ ನೀಡಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಬೇಕು
* ಸ್ವಇಚ್ಛೆಯಿಂದ ನೀಡಿದಾಗ ಸ್ಪೀಕರ್ ರಾಜೀನಾಮೆ ಅಂಗೀಕರಿಸಬೇಕು
* ಶೆಡ್ಯೂಲ್ 10ರ ಪ್ರಕಾರ ರಾಜೀನಾಮೆ ಅಥವಾ ಅನರ್ಹತೆ ಎರಡರಿಂದಲೂ ಶಾಸಕ ಸ್ಥಾನ ಖಾಲಿಯಾಗುತ್ತದೆ
* ಸ್ಪೀಕರ್​ಗೆ ಸದನದ ಅವಧಿ ಮುಗಿಯುವವರೆಗೆ ಅನರ್ಹತೆಗೊಳಿಸುವ ಅಧಿಕಾರವಿಲ್ಲ
* ಸ್ಪೀಕರ್​ಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ನಿದರ್ಶನಗಳು ಹೆಚ್ಚಾಗುತ್ತಿವೆ

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us