‘ಹೊಸ’ಕೋಟೆ: ಅಪ್ಪಾಜೀ ವಿರೋಧ ಲೆಕ್ಕಿಸದೆ ಶರತ್​ಗೆ ಬೆಂಬಲ, HDK ದಾಳ ಏನು?

|

Updated on: Nov 13, 2019 | 5:11 PM

ಬೆಂಗಳೂರು: ಇಂದು ಬೆಳಗ್ಗೆ ರಾಜ್ಯ ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಮಾನ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಪ್ರಮುಖ ಮೂರು ಪಕ್ಷಗಳ ನಡುವೆ ಕೆಸರೆರೆಚಾಟ ರಾಜಕೀಯ ಜಿದ್ದಾಜಿದ್ದಿ, ರಾಜಕೀಯ ಸಮೀಕರಣಗಳು ಬದಲಾಗುತ್ತಿವೆ. ಹೊಸಕೋಟೆ ಕ್ಷೇತ್ರದ ಅಖಾಡ ರಂಗೇರಿದೆ. ಅಲ್ಲಿನ ರಾಜಕೀಯ ಲೆಕ್ಕಾಚಾರಗಳು ರಾಜಕೀಯತ ಹುಬ್ಬೇರಿಸುವಂತೆ ಮಾಡಿದೆ. ಹೆಚ್. ಡಿ. ದೇವೇಗೌಡರ ರಾಜಕೀಯ ವೈರಿ ಬಚ್ಚೇಗೌಡರು ತಮ್ಮ ಪುತ್ರ ಶರತ್ ಬಚ್ಚೇಗೌಡರನ್ನು ಕಣಕ್ಕೆ ಇಳಿಸಿದ್ದ್ದಾರೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ದೇವೇಗೌಡರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅಪ್ಪನ ವಿರೋಧವನ್ನು […]

ಹೊಸಕೋಟೆ: ಅಪ್ಪಾಜೀ ವಿರೋಧ ಲೆಕ್ಕಿಸದೆ ಶರತ್​ಗೆ ಬೆಂಬಲ, HDK ದಾಳ ಏನು?
Follow us on

ಬೆಂಗಳೂರು: ಇಂದು ಬೆಳಗ್ಗೆ ರಾಜ್ಯ ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಮಾನ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಪ್ರಮುಖ ಮೂರು ಪಕ್ಷಗಳ ನಡುವೆ ಕೆಸರೆರೆಚಾಟ ರಾಜಕೀಯ ಜಿದ್ದಾಜಿದ್ದಿ, ರಾಜಕೀಯ ಸಮೀಕರಣಗಳು ಬದಲಾಗುತ್ತಿವೆ. ಹೊಸಕೋಟೆ ಕ್ಷೇತ್ರದ ಅಖಾಡ ರಂಗೇರಿದೆ. ಅಲ್ಲಿನ ರಾಜಕೀಯ ಲೆಕ್ಕಾಚಾರಗಳು ರಾಜಕೀಯತ ಹುಬ್ಬೇರಿಸುವಂತೆ ಮಾಡಿದೆ.

ಹೆಚ್. ಡಿ. ದೇವೇಗೌಡರ ರಾಜಕೀಯ ವೈರಿ ಬಚ್ಚೇಗೌಡರು ತಮ್ಮ ಪುತ್ರ ಶರತ್ ಬಚ್ಚೇಗೌಡರನ್ನು ಕಣಕ್ಕೆ ಇಳಿಸಿದ್ದ್ದಾರೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ದೇವೇಗೌಡರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅಪ್ಪನ ವಿರೋಧವನ್ನು ಲೆಕ್ಕಿಸದೆ ಶರತ್ ಗೆ ಬೆಂಬಲ ಘೋಷಿಸಿದ್ದಾರೆ. ಅಷ್ಟೆ ಅಲ್ಲ ಶರತ್ ಗೆ ಚುನಾವಣಾ ಪ್ರಚಾರದ ವೇಳೆ ಹೆಗಲು ಕೊಡುವಂತೆ ತಮ್ಮ ಪುತ್ರ ನಿಖಿಲ್​ಗೆ ಕುಮಾರಸ್ವಾಮಿ ಆದೇಶಿಸಿದ್ದಾರೆ. ಇದರಿಂದ ಹೊಸಕೋಟೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

ಎಂಟಿಬಿ ನಾಗರಾಜ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್?
ರಾಜಕೀಯ ಮೂಲಗಳ ಪ್ರಕಾರ ತಮ್ಮ ನೇತೃತ್ವದ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಎಂಟಿಬಿ ಪಾತ್ರ ಬಹುಮುಖ್ಯವಾಗಿದೆ. ಅದರಲ್ಲೂ ಸರ್ಆರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನದಲ್ಲಿ ಸಂಧಾನಕ್ಕೆ ಕರೆದಾಗ ಮೈತ್ರಿಗೇ ಬೆಂಬಲ ನೀಡುವುದಾಗಿ ಹೇಳಿ, ಕೊನೆ ಕ್ಷಣದಲ್ಲಿ ಕೈಕೊಟ್ಟು ಎಂಟಿಬಿ ವಿಮಾನವೇರಿ ಮುಂಬೈ ತಲುಪಿಕೊಂಡಿದ್ದನ್ನು ಕುಮಾರಸ್ವಾಮಿ ಮರೆತಂತಿಲ್ಲ. ಇನ್ನು, ನೇರವಾಗಿ ರೇವಣ್ಣ ವಿರುದ್ಧ ಸಹ ಎಂಟಿಬಿ ಹರಿಹಾಯ್ದಿದ್ದರು. ಹಾಗಾಗಿ ಎಂಟಿಬಿ ನಾಗರಾಜ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಉರುಳಿಸಿರುವ ದಾಳ ಇದು ಎನ್ನಲಾಗಿದೆ.

Published On - 4:35 pm, Wed, 13 November 19