ಬೆಂಗಳೂರು: ಸರ್ಕಾರದ ಅಂರ್ತಜಾಲದಲ್ಲಿ ಸಂವಿಧಾನ ಮಾಹಿತಿ ಅಪ್ಲೋಡ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಮಣಿ ಅವರನ್ನು ಅಮಾನತು ಮಾಡಲಾಗಿದೆ.
ಸಿಎಂಸಿಎ ಕೋರಮಂಗಲ ಕಂಪನಿಯು ಸಂವಿಧಾನ ಕೈಪಿಡಿ ಬರೆದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಿತ್ತು. ಅಕ್ಟೋಬರ್ 3 ರಂದು ಟಿಪ್ಪಣಿ ಮೂಲಕ ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಆದೇಶ ನೀಡಿದೆ. ಸಂವಿಧಾನದ ಪುಟ 1 ರಿಂದ 25 ರವರೆಗೆ ಅಂತರ್ಜಾಲದಲ್ಲಿ ಪ್ರಕಟಿಸಲು ಹೇಳಿತ್ತು. ತಜ್ಞರ ಸಮಿತಿಯ ರಚನೆ ಮಾಡಿ, ಆಯುಕ್ತರ ಗಮನಕ್ಕೆ ತಂದು ಬಳಿಕ ಅಂತರ್ಜಾಲದಲ್ಲಿ ಪ್ರಕಟ ಮಾಡಲು ಹೇಳಲಾಗಿತ್ತು.
ಆದ್ರೆ ಕೆಳಹಂತದ ಅಧಿಕಾರಿಗಳು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು. ಇದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ತಪ್ಪಾಗಿ ಗ್ರಹಿಸುವಂತಾಗಿದೆ. ಹೀಗಾಗಿ ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಮಣಿ ಅವರನ್ನು ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.