ಮಂಗಳೂರಿನಲ್ಲಿ ಗುಡ್ಡ ಕುಸಿತ, ಓರ್ವ ಸಾವು

ಮಂಗಳೂರಿನಲ್ಲಿ ಗುಡ್ಡ ಕುಸಿತ, ಓರ್ವ ಸಾವು

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಕುಡುಪುದ ತೇಜಸ್ವಿನಿ ಹಾಸ್ಪಿಟಲ್ ಗ್ರೂಪ್ಸ್ ಆಫ್ ಇನ್ಸ್ಟಿಟೂಷನ್ ಬಳಿ ಗುಡ್ಡ ಕುಸಿತವಾಗಿದೆ. ಗುಡ್ಡದ ಕೆಳಗೆ ಮೂವರು ಕಾರ್ಮಿಕರು‌ ಸಿಲುಕಿಕೊಂಡಿದ್ದರು. ಅವರಲ್ಲಿ ಮೂಡುಶೆಡ್ಡೆ ನಿವಾಸಿ ಶ್ಯಾಮ್ ಎಂಬಾತನನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿದ್ದಾರೆ. ಇನ್ನು ಉಳಿದ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದು, ರಕ್ಷಣೆಯ ಕಾರ್ಯ ಮುಂದುವರಿದಿದೆ.

ದುರಂತಕ್ಕೆ ಸಂಬಂಧಿಸಿ ಸಂಸ್ಥೆಯ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಗುಡ್ಡ ಕೊರೆತದಿಂದ ಅವಘಡ‌ ಸಂಭವಿಸಿದ್ದು, ಸ್ಥಳೀಯರಿಗೆ ಪ್ರತಿಕ್ರಿಯಿಸದೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ಸ್ಥಳಕ್ಕೆ ಆಗಮಿಸಬೇಕು ಅಂತಾ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

Published On - 5:43 pm, Wed, 13 November 19

Click on your DTH Provider to Add TV9 Kannada